ಕುತಂತ್ರಿಗಳ ಷಡ್ಯಂತ್ರ ಬಿಚ್ಚಿಟ್ಟ ಬಸವಂತಪ್ಪ ಕಾಂಬಳೆ
ವಿಜಯಪುರ, 16 ನವೆಂಬರ್ (ಹಿ.ಸ.) : ಆ್ಯಂಕರ್ : ಎರಡು ದಿನಗಳ ಹಿಂದೆ ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ಸಮೀರವಾಡಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಡೆದ ಗಲಭೆ ಹಿಂದೆ ಕುತಂತ್ರಿಗಳ ಕೈವಾಡ ಅಡಗಿದೆ ಎಂದು ರೈತ ಮುಖಂಡ ಬಸವಂತಪ್ಪ ಕಾಂಬಳೆ ತಿಳಿಸಿದ್ದಾರೆ. ಮುಧೋಳದಲ್ಲಿ‌ ಮಾತನಾಡಿದ ಅವರು, ಸಮೀರವಾಡಿ ಕಾ
ಕಬ್ಬು


ವಿಜಯಪುರ, 16 ನವೆಂಬರ್ (ಹಿ.ಸ.) :

ಆ್ಯಂಕರ್ : ಎರಡು ದಿನಗಳ ಹಿಂದೆ ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ಸಮೀರವಾಡಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಡೆದ ಗಲಭೆ ಹಿಂದೆ ಕುತಂತ್ರಿಗಳ ಕೈವಾಡ ಅಡಗಿದೆ ಎಂದು ರೈತ ಮುಖಂಡ ಬಸವಂತಪ್ಪ ಕಾಂಬಳೆ ತಿಳಿಸಿದ್ದಾರೆ.

ಮುಧೋಳದಲ್ಲಿ‌ ಮಾತನಾಡಿದ ಅವರು, ಸಮೀರವಾಡಿ ಕಾರ್ಖಾನೆಗೂ ಮುನ್ನ ಎರಡು ಕಾರ್ಖಾನೆಗೆ ಹೆಚ್ಚಿನ ಸಂಖ್ಯೆಯಲ್ಲಿ ತೆರಳಿ ಬಾಕಿ ವಸೂಲಿ ಮಾಡಿದ್ದೇವೆ. ಅಲ್ಲಿ ಆಗದ ಕಲ್ಲು ತೂರಾಟ, ಗಲಾಟೆ ಸಮೀರವಾಡಿ ಕಾರ್ಖಾನೆಯಲ್ಲಿ ಮಾತ್ರ ಏಕಾಯಿತು ಎಂದು ಪ್ರಶ್ನಿಸಿದರು. ಇದು ಕುತಂತ್ರಿಗಳ ಕೈವಾಡ ಅಡಗಿದೆ. ಅದಕ್ಕಾಗಿ ಪೊಲೀಸರು ಹಾಗೂ ಸರ್ಕಾರದವರು ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande