ಉತ್ತರ ಬಂಗಾಳ ಪ್ರವಾಹ : ರಕ್ಷಣಾ ಕಾರ್ಯದಲ್ಲಿ ಆರ್‌ಎಸ್‌ಎಸ್ ಸ್ವಯಂಸೇವಕರು ಭಾಗಿ
ಕೋಲ್ಕತ್ತಾ, 06 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಉತ್ತರ ಬಂಗಾಳದ ಹಲವಾರು ಜಿಲ್ಲೆಗಳಲ್ಲಿ ನಿರಂತರ ಧಾರಾಕಾರ ಮಳೆಯಿಂದ ಮನೆಗಳು ಮುಳುಗಿ, ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಪ್ರವಾಹದ ಈ ಗಂಭೀರ ಪರಿಸ್ಥಿತಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸ್ವಯಂಸೇವಕರು ತಕ್ಷಣ ಪರಿಹಾರ ಮತ್ತು ರಕ್ಷಣಾ
Rss


ಕೋಲ್ಕತ್ತಾ, 06 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಉತ್ತರ ಬಂಗಾಳದ ಹಲವಾರು ಜಿಲ್ಲೆಗಳಲ್ಲಿ ನಿರಂತರ ಧಾರಾಕಾರ ಮಳೆಯಿಂದ ಮನೆಗಳು ಮುಳುಗಿ, ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಪ್ರವಾಹದ ಈ ಗಂಭೀರ ಪರಿಸ್ಥಿತಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸ್ವಯಂಸೇವಕರು ತಕ್ಷಣ ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ಸ್ವಯಂಸೇವಕರು ಆಹಾರ, ಕುಡಿಯುವ ನೀರು, ಕಂಬಳಿ, ಔಷಧಿ ಮತ್ತು ಅಗತ್ಯ ಸಾಮಗ್ರಿಗಳನ್ನು ಪೀಡಿತ ಪ್ರದೇಶಗಳಿಗೆ ವಿತರಿಸಿದ್ದಾರೆ. ತಗ್ಗು ಪ್ರದೇಶಗಳಲ್ಲಿ ಸಿಲುಕಿರುವ ವೃದ್ಧರು, ಮಕ್ಕಳು ಮತ್ತು ಮಹಿಳೆಯರನ್ನು ದೋಣಿಗಳ ಮೂಲಕ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.

ಜಲಪೈಗುರಿಯ ಮಟಿಯಾಲಿ ಮತ್ತು ಮೇಖ್ಲಿಗಂಜ್, ಕೂಚ್ ಬೆಹಾರ್‌ನ ತುಫಂಗಂಜ್, ಅಲಿಪುರ್ದೂರ್‌ನ ಬರೋಬಿಶಾ ಪ್ರದೇಶಗಳು ಹೆಚ್ಚು ಪೀಡಿತವಾಗಿದ್ದು, ನೀರಿನ ಮಟ್ಟ ಇನ್ನೂ ಅಪಾಯದ ಮಟ್ಟದ ಹತ್ತಿರ ಇದೆ.

ಸ್ಥಳೀಯರು ಆರ್‌ಎಸ್‌ಎಸ್ ಸ್ವಯಂಸೇವಕರ ಮಾನವೀಯ ಸೇವೆಯನ್ನು ಶ್ಲಾಘಿಸಿದ್ದಾರೆ. ಸ್ವಯಂಸೇವಕರು, “ದೇಶದ ಯಾವುದೇ ಭಾಗವು ಬಿಕ್ಕಟ್ಟಿನಲ್ಲಿದ್ದಾಗ, ನಿಸ್ವಾರ್ಥವಾಗಿ ಜನರನ್ನು ತಲುಪುವುದು ಪ್ರತಿಯೊಬ್ಬ ಸ್ವಯಂಸೇವಕರ ಕರ್ತವ್ಯ,” ಎಂದು ತಿಳಿಸಿದ್ದಾರೆ.

ಅಗತ್ಯ ಸಹಾಯ ಕಾರ್ಯಗಳಲ್ಲಿ ನೂರಾರು ಸ್ವಯಂಸೇವಕರು ರಾಜಕೀಯ ಮತ್ತು ಧರ್ಮಪರ ಹಿತಾಸಕ್ತಿಯನ್ನು ಮೀರಿ ಜನರ ರಕ್ಷಣೆಗಾಗಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande