ವಿಜಯಪುರ, 04 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಅಕ್ಟೋಬರ 5 ರಂದು ಬಾಗಲಕೋಟೆ ನಗರದಲ್ಲಿ ಜರುಗಲಿರುವ ಆರ್.ಎಸ್.ಎಸ್. ಪಥ ಸಂಚಲನವನ್ನು ಶಾಂತಿ, ಸೌಹಾರ್ದತೆಯಿಂದ ಆಚರಿಸುವಂತೆ ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ ಕರೆ ನೀಡಿದರು.
ಅಪರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಈ ಕುರಿತು ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ನಗರದಲ್ಲಿ ವ್ಯಕ್ತಿಗತವಾಗಿ ಯಾರ ಭಾವನೆಗೂ ಧಕ್ಕೆ ತರುವಂತ ಹಾಗೂ ಕೋಮು ಸೌಹಾರ್ದತೆ ಕದಡುವ ಘೋಷಣೆ ಹಾಗೂ ಭಾವಚಿತ್ರವುಳ್ಳ ಬಂಟಿ0ಗ್ಸ್, ಬ್ಯಾನರ್‌ಗಳನ್ನು ಹಾಕದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಆರ್.ಎಸ್.ಎಸ್ ಒಂದು ಶಿಸ್ತಿನ ಸಂಘವಾಗಿದ್ದು, ಶಿಸ್ತಿನಿಂದಲೇ ಪಥಸಂಚಲವನ್ನು ಉತ್ಸವದಂತೆ ಆಚರಿಸಿ, ಸಂಭ್ರಮ ತರುವ ಕೆಲಸವಾಗಬೇಕು ಎಂದರು.
ಸAಚಲನದ ಹಿಂದೆ ಹಾಗೂ ಮುಂದೆ ಸಂಘದ ಪ್ರಮುಖ ಸ್ವಯಂ ಸೇವಕರು ಶಾಂತಿ ಕಾಪಾಡಲು ನಿಗಾ ವಹಿಸುವ ಜವಾಬ್ದಾರಿ ಹೊರಬೇಕೆಂದು ತಿಳಿಸಿದ ಅವರು ಪಥ ಸಂಚಲನದ ಮಾರ್ಗದಲ್ಲಿ ಸ್ವಚ್ಛತೆ ಜೊತೆ ರಸ್ತೆಯಲ್ಲಿಯೂ ತಗ್ಗುದಿನ್ನೆ ಮುಚ್ಚುವಂತೆ ಹಾಗೂ ಕಡ್ಡಾಯವಾಗಿ ವಿದ್ಯುತ್ ಸಂಪರ್ಕ ಕಡಿತಗೊಳ್ಳದಂತೆ ನೋಡಿಕೊಳ್ಳಲು ಸಂಬ0ಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಹಾಂತೇಶ್ವರ ಜಿದ್ದಿ ಮಾತನಾಡಿ ಬಾಗಲಕೋಟೆ ನಗರದಲ್ಲಿ ಈ ಬಾರಿಯು ಆರ್.ಎಸ್.ಎಸ್ ಪಥ ಸಂಚಲನವನ್ನು ಸೌಹಾರ್ದತೆಯಿಂದ ಆಚರಿಸುವಂತೆ ಕೋರಿದರು. ಜಿಲ್ಲೆಯ ಜನರು ಶಾಂತಿ-ಸೌಹಾರ್ದತೆಯಿ0ದ ಆಚರಿಸಿ ಏಕತಾ ಮನೋಬಾವ ಮೆರೆಯಬೇಕೆಂದು ಕೋರಿದರು.
ಪಥ ಸಂಚಲನವು ಸಂಜೆ ೪ ಗಂಟೆಗೆ ಪ್ರತ್ಯೇಕ ಎರಡು ಮಾರ್ಗದಲ್ಲಿ ಸಂಚರಿಸಿ, ಕೊನೆಗೆ ಶ್ರೀ ಬಸವೇಶ್ವರ ಮಹಾವಿದ್ಯಾಲಯದ ಮೈದಾನದಲ್ಲಿ ಸೇರಲಿದೆ. ಡಿವಾಯ್‌ಎಸ್ಪಿ ಗಜಾನನ ಸುತಾರ, ಲೋಕೋಪಯೋಗಿ ಇಲಾಖೆಯ ಮುಖ್ಯ ಅಭಿಯಂತರ, ನಗರಸಭೆ ಪೌರಾಯುಕ್ತ ವಾಸಣ್ಣ ಆರ್, ತಹಶೀಲ್ದಾರ ವಾಸುದೇವ ಸ್ವಾಮಿ ಸೇರಿದಂತೆ ಶಾಂತಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದು, ಸಲಹೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande