
ಗದಗ, 31 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಗದಗ ಮತಕ್ಷೇತ್ರದ ಜನತೆ ಅದರಲ್ಲೂ ಗದಗ-ಬೆಟಗೇರಿ ಅವಳಿ ನಗರದ ಜನತೆ ಸುಮಾರು 40 ವರ್ಷಗಳಿಂದ ಕುಡಿಯುವ ನೀರಿಗಾಗಿ ಪರಿದಾಡುವ ಸಮಸ್ಯೆ ಇನ್ನೂ ಜ್ವಲಂತ ಸಮಸ್ಯೆಯಾಗಿಯೇ ಉಳಿದಿದೆ. ಮಾನ್ಯ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ.ಪಾಟೀಲರು ಅವರ ತಂದೆಯವರಾದ ಕೆ.ಎಚ್.ಪಾಟೀಲರ ಹಾಗು ಡಿ.ಆರ್.ಪಾಟೀಲ ಅವರ ಕುಟುಂಬದಿಂದ 3 ಜನ ಶಾಸಕರಾಗಿ, ಮಂತ್ರಿಗಳಾಗಿ ಸುಮಾರು 50 ವರ್ಷಗಳ ಕಾಲ ಗದಗ ಮತಕ್ಷೇತ್ರದಲ್ಲಿ ಆಳುತ್ತಿದ್ದು, ಗದಗ ಮತಕ್ಷೇತ್ರದ ಜನತೆಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ.
ಇಲ್ಲಿನ ಜನರ ಜ್ವಲಂತ ಸಮಸ್ಯೆಯಾದ ನೀರಿನ ಸಮಸ್ಯೆಯನ್ನೇ ಬಗೆಹರಿಸದ ಸಚಿವರು ರಾಜ್ಯ, ದೇಶ ಮತ್ತು ಅಂತಾರಾಷ್ಟ್ರೀಯ ರಾಜಕರಣದ ವಿಷಯಗಳ ಕುರಿತು ಬಹಳ ಮಾರ್ಮಿಕವಾಗಿ ಮಾತನಾಡುತ್ತಾರೆ. ತಮ್ಮ ಮತಕ್ಷೇತ್ರದ ಜ್ವಲಂತ ಸಮಸ್ಯೆಯನ್ನೇ ನೀಗಿಸದ ಎಚ್.ಕೆ.ಪಾಟೀಲರು ಗದಗ ಮತಕ್ಷೇತ್ರದ ಜನರ ನೋವಿಗೆ ಸ್ಪಂಧಿಸುತ್ತಿಲ್ಲಾ. ಅದರ ರಾಜ್ಯ ಸಂಪೂಟ ಸಭೆಯ ಪತ್ರಿಕಾಗೋಷ್ಠಿಗೆ ಸೀಮಿತರಾಗಿರುವರು.
ಅನೇಕ ಗದುಗಿನ ಹಿತೈಷಿಗಳು ನೀರಿನ ಸಮಸ್ಯೆಯನ್ನು ಹೇಳಿಕೊಂಡಾಗ ನಿನ್ನ ಕೆಲಸದ ಬಗ್ಗೆ ಮಾತ್ರ ಮಾತನಾಡು ಎನ್ನುವ ಸಚಿವರು ಗದಗ-ಬೆಟಗೇರಿ ಜನರ ಕಣ್ಣಿರು ಒರೆಸುವದು ಇರಲಿ ಕುಡಿಯುವ ನೀರು, ಸ್ನಾನಕ್ಕಾಗಿ, ಶೌಚ್ಚಕ್ಕಾಗಿ ನೀರಿಗಾಗಿ ಪರದಾಡುವ ಪರಿಸ್ಥಿತಿ ಕ್ಷೇತ್ರದ ಜನ ಎದುರಿಸುತ್ತಾರೆ. ಅದಕ್ಕಾಗಿ ಗದಗ ಮತಕ್ಷೇತ್ರದ ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರು ಸಚಿವರಾದ ಎಚ್.ಕೆ.ಪಾಟೀಲರ ಮನೆಗೆ ಸ್ನಾನಕ್ಕಾಗಿ ಹೋಗುವದು ಸೂಕ್ತ. ಸಚಿವರು ರಾಜಕಾರಣದಲ್ಲಿ ಪ್ರಭಾವಿಗಳು, ಕರ್ನಾಟಕದಲ್ಲಿ ಹೆಸರುವಾಸಿಗಳು. ನಾನು ಸಚಿವರಿಗೆ ಸವಾಲು ಹಾಕುತ್ತೇನೆ ನಿಮ್ಮ ರಾಜಕಾರಣದ ಇಷ್ಟು ದಿನಗಳ ಸಾಧನೆಗಳು ಇರಲಿ ಗದಗ ಮತಕ್ಷೇತ್ರದ ನೀರಿನ ಜ್ವಲಂತ ಸಮಸ್ಯೆಯನ್ನು 6 ತಿಂಗಳ ಒಳಗಾಗಿ ನಿಮ್ಮಿಂದ ಬಗೆಹರಿಸಲು ಸಾಧ್ಯನಾ? ಜನರ ಮುಂದೆ ಸಾಬಿತಾಗಲಿ ಹಾಗೇನಾದರೂ 6 ತಿಂಗಳಲ್ಲಿ ಮುಖ್ಯಮಂತ್ರಿಗಳ ಆಪ್ತರಾದ ಸಚಿವರು ವಿಶೇಷ ಅನುಧಾನ ತಂದು ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಿದರೆ ನಾನು ಕೂಡ ಅಭಿನಂದಿಸುತ್ತೇನೆ, ಇಲ್ಲವಾದರೆ ಮುಂದೆ ಬರುವ ಚುನಾವಣೆಯಲ್ಲಿ ಗದಗ ಮತಕ್ಷೇತ್ರದ ಜನತೆ ನೀರಿಗಾಗಿ ಯಾರಿಗೆ ನೀರು ಕುಡಿಸಬೇಕು ಎಂದು ನಿರ್ಣಯಿಸುತ್ತಾರೆ ಎಂದು ಬಿಜೆಪಿ ಗದಗ ಜಿಲ್ಲಾಧ್ಯಕ್ಷರಾದ ತೋಟಪ್ಪ(ರಾಜು) ಕುರುಡಗಿ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP