
ಬೆಂಗಳೂರು, 31 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಜನಪ್ರತಿನಿಧಿಗಳು, ಅಧಿಕಾರಿಗಳು, ಮಾಧ್ಯಮ ಹಾಗೂ ಚಲನಚಿತ್ರ ಕ್ಷೇತ್ರ ಮತ್ತು ವೈದ್ಯಕೀಯ ರಂಗದವರಿಗಾಗಿ '9' ಡ್ರೀಮ್ಸ್ ಸಂಸ್ಥೆ ಆಯೋಜಿಸುತ್ತಿರುವ ಸಿಎಂ ಕಪ್ 2026 ಕ್ರಿಕೆಟ್ ಮತ್ತು ಬ್ಯಾಡ್ಮಿಂಟನ್ ಪಂದ್ಯಾವಳಿಯ ಲೋಗೋವನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ಅನಾವರಣಗೊಳಿಸಿದರು.
ವಿಧಾನ ಸೌಧದ ಕೊಠಡಿ ಸಂಖ್ಯೆ 204 ರಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಅವರ ಮಾಧ್ಯಮ ಸಲಹೆಗಾರ ಲಕ್ಷ್ಮೀನಾರಾಯಣ್, ಪ್ರೆಸ್ ಕ್ಲಬ್ ಕಾರ್ಯದರ್ಶಿ-ರಾಜ್ಯ ಖೋ ಖೋ ಸಂಘದ ಉಪಾಧ್ಯಕ್ಷ ಜಿ.ವೈ. ಮಂಜುನಾಥ್, ಚಲನಚಿತ್ರ ನಟಿ ಜಯಶ್ರೀ, ಡ್ಯಾನ್ಸ್ ಮಾಸ್ಟರ್ ನಟ ಚಂದ್ರ ಮಯೂರ್, ಕಲಾವಿದರಾದ ಅಲಕಾನಂದ, ಕ್ರೀಡಾ ತರಬೇತುದಾರ ಆಶಿಕ್ ಅವರ ಉಪಸ್ಥಿತಿಯಲ್ಲಿ ಪ್ರಭಾಕರ್ ಅವರು ಲೋಗೋ ಬಿಡುಗಡೆ ಮಾಡುವ ಮೂಲಕ ಪಂದ್ಯಾವಳಿಯ ಮುಂದಿನ ಸಿದ್ಧತೆಗಳಿಗೆ ಹಸಿರು ನಿಶಾನೆ ತೋರಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa