
ನವದೆಹಲಿ, 30 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಸರ್ಕಾರಿ ಸ್ವಾಮ್ಯದ ಗಣಿಗಾರಿಕೆ ಸಂಸ್ಥೆ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ 2025-26ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ದಾಖಲೆ ಮಟ್ಟದ ಉತ್ಪಾದನೆ ಮತ್ತು ಮಾರಾಟ ಸಾಧಿಸಿದೆ.
ಉತ್ಪಾದನೆ 10.21 ಮಿಲಿಯನ್ ಟನ್ ಆಗಿದ್ದು, ಹಿಂದಿನ ವರ್ಷದ 8.29 ಮಿಲಿಯನ್ ಟನ್‌ಗಿಂತ 23% ಏರಿಕೆ, ಮಾರಾಟವು 10.72 ಮಿಲಿಯನ್ ಟನ್ ಆಗಿ 10% ಹೆಚ್ಚಾಗಿದೆ.
ಕಂಪನಿಯ ಒಟ್ಟು ಆದಾಯ ₹6,261 ಕೋಟಿ (30% ಏರಿಕೆ), ತೆರಿಗೆಗೆ ಮುಂಚಿನ ಲಾಭ ₹2,271 ಕೋಟಿ (35% ಏರಿಕೆ), ಮತ್ತು ತೆರಿಗೆ ನಂತರದ ಲಾಭ ₹1,694 ಕೋಟಿ (33% ಏರಿಕೆ) ದಾಖಲಿಸಿದೆ. EBITDA ₹2,385 ಕೋಟಿ ಆಗಿದ್ದು, 32% ಏರಿಕೆಯಾಗಿದೆ.
ಎನ್‌ಎಂಡಿಸಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಮಿತಾಭ್ ಮುಖರ್ಜಿ ಮಾಹಿತಿ ನೀಡಿದ್ದು, ದಾಖಲೆಯ ಉತ್ಪಾದನೆ ಹಾಗೂ ಬಲವಾದ ಆರ್ಥಿಕ ಬೆಳವಣಿಗೆ ನಮ್ಮ ವಿಶ್ವಾಸಾರ್ಹತೆಯ ಸಾಕ್ಷಿಯಾಗಿದೆ. ಗುಣಮಟ್ಟದ ಕಬ್ಬಿಣದ ಅದಿರು ಪೂರೈಕೆ ಮತ್ತು ವಿಸ್ತರಣಾ ಯೋಜನೆಗಳ ಮೂಲಕ ಭಾರತವನ್ನು ಕೈಗಾರಿಕಾ ಶಕ್ತಿಕೇಂದ್ರವನ್ನಾಗಿ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa