
ವಿಜಯಪುರ, 28 ಅಕ್ಟೋಬರ್(ಹಿ.ಸ.) :
ಆ್ಯಂಕರ್ : ಶ್ರೀಮದ್ವೀರಶೈವ ಶಿವಯೋಗಮಂದಿರ ಸಂಸ್ಥೆಯ ಸಂಸ್ಥಾಪಕರಾದ ಹಾನಗಲ್ಲ ಶ್ರೀ ಮ. ನಿ. ಪ್ರ. ಕುಮಾರ ಶಿವಯೋಗಿಗಳವರ ದಿವ್ಯ ಪ್ರಕಾಶದಲ್ಲಿ ಶಿವಯೋಗಸಿರಿ, ತಪೋಧನರಾದ ಶ್ರೀ ಮ. ನಿ. ಪ್ರ ಸದಾಶಿವ ಮಹಾಸ್ವಾಮಿಗಳವರ 42ನೇ ಪುಣ್ಯಸ್ಮರಣೋತ್ಸವ
ನ.3 ರಂದು ಸೋಮವಾರ ಶಿವಯೋಗಮಂದಿರದ ಚಿತ್ತರಗಿ ಶ್ರೀ ವಿಜಯಮಹಾಂತೇಶ್ವರ ಬಯಲು ವೇದಿಕೆಯಲ್ಲಿ ಜರುಗಲಿದೆ.
ಹುಬ್ಬಳ್ಳಿ ಮೂರು ಸಾವಿರ ಮಠದ ಅಧ್ಯಕ್ಷ ಶ್ರೀಮನ್ಮಹಾರಾಜ ನಿರಂಜನ ಜಗದ್ಗುರು ಡಾ. ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಗಳು ಪೂಜ್ಯರ ಸಂಕಲ್ಪದಂತೆ ಕಾರ್ಯಕ್ರಮಗಳು ಜರುಗಲಿವೆ.
ಅಂದು ಬೆಳಿಗ್ಗೆ 10-30ಕ್ಕೆ ಷಟ್‌ಸ್ಥಲ ಧ್ವಜಾರೋಹಣ ನೆರವೇರಲಿದೆ. ನಂತರ ಪೂಜ್ಯ ಶ್ರೀ ಸದಾಶಿವ ಮಹಾಸ್ವಾಮಿಗಳವರ ಭಾವಚಿತ್ರ ಮೆರವಣಿಗೆ ನಡೆಯಲಿದ್ದು, ಸುತ್ತಮುತ್ತಲಿನ ಗ್ರಾಮಗಳ ಭಜನಾಮಂಡಳಿ, ಡೊಳ್ಳುಮೇಳ ಹಾಗೂ ವಿವಿಧ ಕಲಾ ತಂಡಗಳೊಂದಿಗೆ ಹರಗುರು ಚರಮೂರ್ತಿಗಳ ದಿವ್ಯ ಸಮ್ಮುಖದಲ್ಲಿ ಶ್ರೀ ಶಿವಯೋಗಮಂದಿರ ಸಂಸ್ಥೆಯ ವಟು-ಸಾಧಕರ ಹಾಗೂ ಸಕಲ ಸದ್ಭಕ್ತರ ಉಪಸ್ಥಿತಿಯಲ್ಲಿ ಜರುಗುವುದು.
ಬೆಳಿಗ್ಗೆ 11-30ಕ್ಕೆ ನಡೆಯಲಿರುವ ಪೂಜ್ಯರ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ನಾಡಿನ ಪೂಜ್ಯ ಜಗದ್ಗುರುಗಳು, ಹರಗುರು ಚರಮೂರ್ತಿಗಳು,
ಶಿವಯೋಗಮಂದಿರ ಸಂಸ್ಥೆಯ ಧರ್ಮದರ್ಶಿಗಳು, ಗಣ್ಯರು, ಜನಪ್ರತಿನಿಧಿಗಳು ಹಾಗೂ ಸಕಲ ಸದ್ಭಕ್ತರು ಪಾಲ್ಗೊಳ್ಳುವರು. ನಂತರ ಕುಮಾರಗೌಡ ಜನಾಲಿ ಮತ್ತು ಜನಾಲಿ ಕುಟುಂಬದವರಿಂದ ಮಹಾಪ್ರಸಾದ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande