ಕಾಂಗ್ರೆಸ್ ಶಾಸಕ ಪಾಟೀಲ್ ವಿರುದ್ಧ ಗಾಣಿಗ ಸಮಾಜದ ಪ್ರತಿಭಟನೆ
ವಿಜಯಪುರ, 28 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಹಾಲುಮತ ಹಾಗೂ ಗಾಣಿಗ ಸಮಾಜಕ್ಕೆ ಅವಮಾನ ಮಾಡಿರುವ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲಗೆ ಜಿಲ್ಲೆ ನಿರ್ಬಂಧಕ್ಕೆ ಗಾಣಿಗ ಸಮಾಜದವರು ಆಗ್ರಹಿಸಿ ವಿಜಯಪುರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಗಾಣಿಗ ಹಾಗೂ ಹಾಲುಮತ ಸಮಾಜದ ವಿರುದ್ದ ಅವಾಚ್ಯ ಶಬ್ದ ಬಳಿಸಿರ
ಶಾಸಕ


ವಿಜಯಪುರ, 28 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಹಾಲುಮತ ಹಾಗೂ ಗಾಣಿಗ ಸಮಾಜಕ್ಕೆ ಅವಮಾನ ಮಾಡಿರುವ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲಗೆ ಜಿಲ್ಲೆ ನಿರ್ಬಂಧಕ್ಕೆ ಗಾಣಿಗ ಸಮಾಜದವರು ಆಗ್ರಹಿಸಿ ವಿಜಯಪುರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಗಾಣಿಗ ಹಾಗೂ ಹಾಲುಮತ ಸಮಾಜದ ವಿರುದ್ದ ಅವಾಚ್ಯ ಶಬ್ದ ಬಳಿಸಿರುವ ಇಂಡಿ ಶಾಸಕ ಯಶವಂತರಾಯಗೌಡ ಖಂಡಿಸಿ ಮನವಿ ನೀಡಲಾಗಿದೆ. 2018ರ ವಿಧಾನಸಭೆ ಚುನಾವಣೆಯ ಪ್ರಚಾರದ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ವಿಡಿಯೋ ಇದೀಗ ವೈರಲ್ ಆಗಿದೆ.

ಕನ್ನೇರಿ ಶ್ರೀಗಳಿಗೆ ವಿಜಯಪುರ - ಬಾಗಲಕೋಟಗೆ ನಿರ್ಬಂಧ ಹಾಕಿದಂತೆ ಶಾಸಕರಿಗೂ ಹಾಕುವಂತೆ ಗಾಣಿಗ ಸಮಾಜದ ಮುಖಂಡ ದಯಾಸಾಗರ ಪಾಟೀಲ್ ನೇತೃತ್ವದಲ್ಲಿ ಆಗ್ರಹಿಸಿದರು.

ಈ ಕೂಡಲೇ ಶಾಸಕರಿಗೆ ಜಿಲ್ಲಾ ಪ್ರವೇಶ ಕ್ಕೆ ನಿರ್ಬಂಧ ಹೇರಬೇಕು. ಹಿಂದೂ ಸಮಾಜದ ಸ್ವಾಮಿಜಿಗಳಿಗೆ ಒಂದು ನ್ಯಾಯ, ಶಾಸಕರಿಗೆ ಒಂದು ನ್ಯಾಯ ಆದ್ರೆ ನಾವು ಸಹಿಸಲ್ಲ. ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹಾಲುಮತ ಹಾಗೂ ಗಾಣಿಗ ಸಮಾಜಕ್ಕೆ ಕ್ಷಮೆ ಕೇಳಬೇಕು. ಅಲ್ಲದೇ, ಜಿಲ್ಲಾಡಳಿತ ಈ ಕೂಡಲೇ ಶಾಸಕರಿಗೆ ನಿರ್ಬಂಧ ಹೇರಬೇಕು. ಇಲ್ಲವಾದ್ರೆ ಮುಂದೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಗಾಣಿಗ ಸಮಾಜದವರು ಎಚ್ಚರಿಕೆ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande