
ಬೆಂಗಳೂರು, 27 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸುರಂಗ ರಸ್ತೆ ಯೋಜನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ಅವರು ತೀವ್ರ ಟೀಕೆ ಮಾಡಿದ್ದಾರೆ. ಅವರು ಸಾಮಾಜಿಕ ಜಾಲತಾಣದ ಮೂಲಕ ಸುರಂಗ ರಸ್ತೆ ಯೋಜನೆ ಪರಿಸರಕ್ಕೆ ಅಪಾಯಕಾರಿಯೆಂದು ಆರೋಪಿಸಿದ್ದಾರೆ.
ಈ ಸುರಂಗ ರಸ್ತೆ ಯೋಜನೆ ಜಲಮೂಲ ಮತ್ತು ಅಂತರ್ಜಲ ಸಂಪತ್ತಿಗೆ ಧಕ್ಕೆ, ನಗರದ ಪರಿಸರಕ್ಕೆ ದೊಡ್ಡ ಪೆಟ್ಟು. ಲಾಲ್ ಬಾಗ್, ಕಬ್ಬನ್ ಪಾರ್ಕ್ ನಂತಹ ಪ್ರಮುಖ ಸ್ಥಳಗಳುಗೆ ಹಾನಿಯಾಗಲಿದೆ. ಸಂಚಾರ ಸಮಸ್ಯೆಗೆ ಇದು ಶಾಶ್ವತ ಪರಿಹಾರ ಅಲ್ಲ” ಎಂದು ಹೇಳಿದ್ದಾರೆ.
ಅವರು ಡಿ.ಕೆ.ಶಿವಕುಮಾರ್ ಅವರ ಹಠವನ್ನು ಪ್ರಶ್ನಿಸಿದ್ದು, “ಐಐಎಸ್ಸಿ ವರದಿ, ವಿಜ್ಞಾನಿಗಳು, ಪರಿಸರ ತಜ್ಞರು, ನಾಗರೀಕರು ಎಲ್ಲರೂ ವಿರೋಧಿಸುತ್ತಿರುವಾಗಲೂ ನೀವು ಈ ಯೋಜನೆಗೆ ಅಚಲ ಆಸಕ್ತಿ ತೋರಿಸುತ್ತಿರುವುದು ಯಾಕೆ? ಇದರಲ್ಲಿ ಮುಖ್ಯಮಂತ್ರಿ ಹುದ್ದೆಯ ಕನಸು ಅಥವಾ ರಾಜಕೀಯ ಉದ್ದೇಶಗಳಿವೆಯೇ ಎಂದು ಪ್ರಶ್ನಿಸಿದ್ದಾರೆ.
ಅಶೋಕ ಅವರು ಈ ಯೋಜನೆಯನ್ನು ಅವೈಜ್ಞಾನಿಕ ಎಂದಿದ್ದು ,ಇಂತಹ ಯೋಜನೆಗಳನ್ನು ಹೇರಬೇಡಿ, ಬೆಂಗಳೂರಿನ ವಿಲನ್ ಆಗಬೇಡಿ ಎಂದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa