

ಕೋಲಾರ, ೨೭ ಅಕ್ಟೋಬರ್ (ಹಿ.ಸ) :
ಆ್ಯಂಕರ್ : ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ ಕೋಲಾರ ಹಾಗೂ ಈ ನೆಲ ಈ ಜಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆ ಕೋಲಾರ ಇವರ ಸಹಯೋಗದಲ್ಲಿ ಕೋಲಾರ, ಕೆಜಿಎಫ್ ಮತ್ತು ಬಂಗಾರಪೇಟೆ ತಾಲೂಕುಗಳಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಆರೋಗ್ಯ ಇಲಾಖೆಯ ಯೋಜನೆಗಳ ಕುರಿತು ಜನಪದ ಕಲಾ ತಂಡದಿ0ದ ಬೀದಿ ನಾಟಕ ಮೂಲಕ ಗ್ರಾಮಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಪ್ರಚಾರ ಹಾಗೂ ಜನಜಾಗೃತಿ ಮೂಡಿಸಲಾಯಿತು.
ತಾಯಿ ಮಗುವಿನ ಹಾರೈಕೆ ಮತ್ತು ವಿವಿಧ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಗರ್ಭಿಣಿ ಹಾರೈಕೆ, ಆಸ್ಪತ್ರೆ ಹೆರಿಗೆ, ಎದೆ ಹಾಲಿನ ಮಹತ್ವ, ಲಸಿಕೆ, ಕುಟುಂಬ ಕಲ್ಯಾಣ ನಿಯಂತ್ರಣ, ಶಸ್ತçಚಿಕಿತ್ಸೆ, ಲಿಂಗ ಪತ್ತೆ ನಿಷೇಧ ಹಾಗೂ ಹೃದಯ ಪುನರು ಜೀವನ ಬಗ್ಗೆ ಜನರಿಗೆ ಜನಪದ ಗಾಯನದ ಮೂಲಕ ಮತ್ತು ಬೀದಿ ನಾಟಕದ ಮೂಲಕ ಅರಿವು ಮೂಡಿಸಲಾಯಿತು.
ಜಿಲ್ಲಾಧಿಕಾರಿಗಳ ಆದೇಶದಂತೆ ಕೋಲಾರ ಜಿಲ್ಲಾಧ್ಯಂತ ಆರ್‌ಎಂಪಿ ನಕಲಿ ಕ್ಲಿನಿಕ್‌ನ ಡಾಕ್ಟರ್‌ಗಳ ಬಳಿ ಚಿಕಿತ್ಸೆ ಪಡೆಯಬಾರದು ಎಂಬ ವಿಚಾರದ ಬಗ್ಗೆಯೂ ಕೂಡ ಬೀದಿ ನಾಟಕ ಮೂಲಕ ಅರಿವು ಮೂಡಿಸಲಾಯಿತು.
ಬೀದಿ ನಾಟಲ್ಲಿ ಕಲಾವಿದರುಗಳಾದ ಈ ನೆಲ ಈಜಲ ವೆಂಕಟಾಚಲಪತಿ, ಎಚ್.ಶಾಂತಮ್ಮ, ಶಾರದಮ್ಮ, ಗಣೇಶಪ್ಪ ಎನ್, ಶೈಲಜಾ.ಎಂ, ಜಯಪ್ಪ.ವಿ, ಕೃಷ್ಣಾರೆಡ್ಡಿ ಮತ್ತು ತಮಟೆ ಕಲಾವಿದ ವೀರಸ್ವಾಮಿ ಭಾಗವಹಿಸಿದ್ದರು.
ಚಿತ್ರ : ಕೆಜಿಎಫ್ ತಾಲ್ಲೂಕು ಕ್ಯಾಸಂಬಳ್ಳಿ ಗ್ರಾಮದಲ್ಲಿ ಈನೆಲ ಈಜಲ ಸಂಸ್ಥೆಯಿAದ ಬೀದಿ ನಾಟದಕ ಮೂಲಕ ಆರೋಗ್ಯ ಜನ ಜಾಗೃತಿ ಕಾರ್ಯಕ್ರಮ ನಡೆಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್