ಸಾಧನೆಗೆ ಸಿದ್ದತೆ, ಬದ್ದತೆ ಅಗತ್ಯ : ಡಾ.ಕೆ.ಎಸ್. ಮುನಿಸ್ವಾಮಿಗೌಡ
ಹಾಸನ, 27 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಸಾಧನೆಗೆ ಸಿದ್ದತೆ, ಬದ್ದತೆ, ಹೋರಾಟ, ಪ್ರೀತಿ ಇರಬೇಕು, ಆಗಮಾತ್ರ ನೀವು ಸಾಧಿಸಲು ಸಾಧ್ಯ ಎಂದು ಹಾಸನ ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಕೆ.ಎಸ್. ಮುನಿಸ್ವಾಮಿಗೌಡ ಅವರು ತಿಳಿಸಿದ್ದಾರೆ. ಹಾಸನ ನಗರದ ಹೊರವಲಯದ ಕಾರೆಕೆರೆ ಗ್ರಾಮದಲ್ಲಿರುವ ಕೃಷಿ ಮಹಾವಿದ್ಯಾಲಯ
Initiation


ಹಾಸನ, 27 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಸಾಧನೆಗೆ ಸಿದ್ದತೆ, ಬದ್ದತೆ, ಹೋರಾಟ, ಪ್ರೀತಿ ಇರಬೇಕು, ಆಗಮಾತ್ರ ನೀವು ಸಾಧಿಸಲು ಸಾಧ್ಯ ಎಂದು ಹಾಸನ ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಕೆ.ಎಸ್. ಮುನಿಸ್ವಾಮಿಗೌಡ ಅವರು ತಿಳಿಸಿದ್ದಾರೆ.

ಹಾಸನ ನಗರದ ಹೊರವಲಯದ ಕಾರೆಕೆರೆ ಗ್ರಾಮದಲ್ಲಿರುವ ಕೃಷಿ ಮಹಾವಿದ್ಯಾಲಯದಲ್ಲಿಂದು ಆಯೋಜಿಸಲಾಗಿದ್ದ 2025-26ನೇ ಸಾಲಿನ ಕೃಷಿ ಪದವಿ ಶಿಕ್ಷಣಕ್ಕೆ ಪ್ರವೇಶ ಪಡೆದಿರುವ ನೂತನ ವಿದ್ಯಾರ್ಥಿಗಳಿಗೆ ಸ್ನಾತಕ ಪದವಿಗಳ ಪರಿಚಯ ದೀಕ್ಷಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪರಿಪೂರ್ಣ ವ್ಯಕ್ತಿಯಾಗಲು ಆತ್ಮವಿಶ್ವಾಸ ಇರಬೇಕು. ಮೊಬೈಲ್ ಬಿಟ್ಟು ಒಳ್ಳೆಯ ಪುಸ್ತಕ ಓದಿ. ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳಿ. ನಿತ್ಯ ವ್ಯಾಯಾಮ ಮಾಡಿ ದೇಹ ದಂಡಿಸಿದರೆ ಮನಸ್ಸು ಪ್ರಪುಲ್ಲವಾಗುತ್ತದೆ ಎಂದು ಹೇಳಿದರು.

ಪ್ರಸ್ತುತ ಆಹಾರ, ನೀರು, ರಾಸಾಯನಿಕ ಬಳಕೆಯಿಂದ ಕಲುಷಿತವಾಗಿದೆ. ಆದಕಾರಣ ಜಂಕ್ ಆಹಾರ ಬಿಟ್ಟು ಒಳ್ಳೆಯ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ ಎಂದು ಸಲಹೆ ಮಾಡಿದರಲ್ಲದೆ, ಕೃಷಿ ಪದವಿಯನ್ನು ನೀವು ಆಯ್ಕೆ ಮಾಡಿಕೊಂಡಿರುವುದು ಅತ್ಯುತ್ತಮವಾಗಿದೆ. ಬೇರಾವುದೇ ಪದವಿಗೆ ಕೃಷಿ ಪದವಿ ಹೋಲಿಕೆ ಮಾಡಿದರೆ ಈ ಪದವಿಗೆ ವಿಶಾಲವಾದ ಉದ್ಯೋಗವಕಾಶ ಇದೆ. ಕೃಷಿ ಆಧಾರಿತ ಉದ್ದಿಮೆ ಸ್ಥಾಪನೆ ಮಾಡುವುದು ಮಾತ್ರವಲ್ಲದೆ, ವೈಜ್ಞಾನಿಕವಾಗಿ ಮುಂದುವರೆಯಲು ವಿಫುಲ ಅವಕಾಶಗಳಿವೆ ಎಂದರು.

ವೇದಿಕೆಯಲ್ಲಿ ಮಹಾವಿದ್ಯಾಲಯದ ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ. ಬೈರಪ್ಪನವರ್, ಡಾ. ಕೃಷ್ಣಪ್ರಸಾದ್, ಡಾ. ವಿಶ್ವನಾಥ್ ಅಂಗಡಿ, ಡಾ. ನಟರಾಜ್, ಡಾ. ಕಣವಿ, ಡಾ. ಪ್ರಕಾಶ್, ಡಾ. ಶಶಿಕಿರಣ್, ಸಹಾಯಕ ಕುಲಸಚಿವ ಶಿವಶಂಕರ್, ಅಸಿಸ್ಟೆಂಟ್ ಕಂಟ್ರೋಲರ್ ನಾಗೇಂದ್ರಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande