
ವಿಜಯಪುರ, 27 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಕನೇರಿ ಶ್ರೀಗಳು ಆಡಿರುವ ಒಂದು ಪದಪ್ರಯೋಗಕ್ಕೆ ನನ್ನ ವಿರೋಧವಿದೆ, ಅವರ ಅಧ್ಯಾತ್ಮ, ಕೃಷಿ ಕ್ಷೇತ್ರದ ಕೊಡುಗೆಗಳ ಬಗ್ಗೆ ನನಗೆ ಈಗಲೂ ಗೌರವವಿದೆ, ಇನ್ನೊಬ್ಬರ ತಾಯಿಗೆ ಬೈಯುವ ಹಕ್ಕು ಯಾರಿಗೂ ನೀಡಿಲ್ಲ, ಕ್ಷಮೆ ಕೇಳಿದರೆ ಎಲ್ಲವೂ ಮುಗಿದು ಹೋಗುತ್ತದೆ ಎಂದು ಸಚಿವ ಡಾ.ಎಂ.ಬಿ. ಪಾಟೀಲ ಪುನರುಚ್ಚರಿಸಿದರು.
ವಿಜಯಪುರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘ ಪರಿವಾರದಲ್ಲಿ ಕನೇರಿ ಶ್ರೀಗಳು ಭಾಗವಹಿಸಿದ್ದಾರೆ, ಆದರೆ ಅದಕ್ಕೆ ನಮ್ಮ ತಕರಾರಿಲ್ಲ, ಅದು ಅವರ ಆಶಯ, ಯಾರೂ ಸಹ ಆ ಪದ ಪ್ರಯೋಗ ಮಾಡಬಾರದು, ನಾವು ಸಾಮಾನ್ಯರು, ನಮಗೂ ಸ್ವಾಮೀಜಿಗಳಿಗೂ ದೊಡ್ಡ ಅಂತರವಿದೆ, ಸೂಳೆ ಎಂದರೆ ಕೆಟ್ಟವಳು ಎಂಬರ್ಥವಲ್ಲ, ಬಡತನ, ನೋವಿನಿಂದ ಆ ವೃತ್ತಿಗೆ ಬಂದಿರುತ್ತಾಳೆ, ಈ ಕಾರಣಕ್ಕಾಗಿ ಸೂಳೆ ಸಂಕವ್ವ ಸಹ ಶರಣೆಯೇ, ಆದರೆ ಕನೇರಿ ಶ್ರೀಗಳು ಹೇಳಿರುವ ಕೆಲವೊಂದು ಪದಗಳಿಂದ ಎಲ್ಲರ ಮನಸ್ಸಿಗೂ ಬೇಜಾಗಿದೆ ಎಂದರು.
ಉಚ್ಚಾಟಿತ ಅಣ್ಣ ತಮ್ಮಾಸ್ ಇಬ್ಬರೂ ವಿನಾಕಾರಣ ಈ ವಿಷಯವನ್ನು ದೊಡ್ಡದು ಮಾಡುತ್ತಿದ್ದಾರೆ ಎಂದು ಈಶ್ವರಪ್ಪ ವಿರುದ್ಧವೂ ಎಂಬಿಪಿ ಗುಡುಗಿದರು.
ಪಾಪ ಕೂಡಲಸಂಗಮ ಸ್ವಾಮೀಜಿಯವರು ಇದೇ ಯತ್ನಾಳರನ್ನು ನಂಬಿ ಹೋದರು, ಆದರೆ ಅವರನ್ನು ಒಬ್ಬಂಟಿ ಮಾಡಲಾಗಿದೆ ಎಂದರು.
ಭೌಗೋಳಿಕವಾಗಿ, ಜನಾಂಗೀಯವಾಗಿ ನಾವೆಲ್ಲರೂ ಹಿಂದೂಗಳು, ಬುದ್ದ, ಸಿಖ್ ಧರ್ಮದಂತೆ ಲಿಂಗಾಯತ ಸಹ ಒಂದು ಧರ್ಮ, ೨೦೧೪ ರಲ್ಲಿ ಜೈನ ಧರ್ಮಕ್ಕೆ ಮಾನ್ಯತೆ ದೊರಕಿತು, ಆಗ ಬಿಜೆಪಿ ನಾಯಕರು ಏಕೆ ಮಾತನಾಡಲಿಲ್ಲ, ನಂತರ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೂ ಅದನ್ನು ರದ್ದು ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ನಾವು ಯಾರನ್ನೂ ಟೀಕೆ ಮಾಡುವುದಿಲ್ಲ. ಹಿಂಧೂ ಧರ್ಮದ ಬಗ್ಗೆ ಅರ್ನಬ್ ಗೋ ಸ್ವಾಮಿ ಅವರಿಗೆ ನೀಡಿದ ಸಂದರ್ಶನದಲ್ಲಿ ನರೇಂದ್ರ ಮೋದಿ ಅವರೇ ಹಿಂದೂ ಎಂದರೆ ಧರ್ಮವಲ್ಲ ಎಂದು ಹೇಳಿದ್ದಾರೆ, ನಾನು ಹಿಂದೂ ಒಂದು ಧರ್ಮ ಎಂದು ಒಪ್ಪುತ್ತೇನೆ ಎಂದರು.
ಭೂಗಹರಣ ಮಾಡಿದರೆ ನಿರ್ದಾಕ್ಷೀಣ್ಯ ಕ್ರಮ
ನಾನು ಪರರ ಒಂದಿಂಚೂ ಭೂಮಿಯನ್ನು ಆಸೆಪಡುವವನಲ್ಲ. ಇಲ್ಲಿಯವರೆಗೆ ನಾನು ಜಿ-ಕೆಟಗರಿ ಸೈಟ್ ಸಹ ಪಡೆದುಕೊಂಡಿಲ್ಲ, ನನ್ನ ಹಿಂದೆ ಇರುವವರು ಭೂಹಗರಣ ಮಾಡಿದ್ದನ್ನು ಅವರು ನನಗೆ ದಾಖಲೆ ಕೊಡಲಿ, ನಾನೇ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳುವುದಾಗಿ ಸಂಬಂಧಿಸಿದ ಇಲಾಖೆಗೆ ಹೇಳುವೆ ಎಂದರು.
ಹಿಂದೂಸ್ತಾನ್ ಸಮಾಚಾರ್ / jyothi deshpande