
ನವದೆಹಲಿ, 26 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಭಾನುವಾರ ನಡೆದ ಆಸಿಯಾನ್ ಶೃಂಗಸಭೆಯ ಉದ್ಘಾಟನಾ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು “21ನೇ ಶತಮಾನವು ಭಾರತ ಮತ್ತು ಆಸಿಯಾನ್‌ನ ಶತಮಾನ” ಎಂದು ಬಣ್ಣಿಸಿದರು. ಭಾರತ ಯಾವಾಗಲೂ ಆಸಿಯಾನ್ ಕೇಂದ್ರಿತವಾಗಿದ್ದು, ಇಂಡೋ–ಪೆಸಿಫಿಕ್ ಪ್ರದೇಶದ ಬಗ್ಗೆ ಆಸಿಯಾನ್‌ನ ದೃಷ್ಟಿಕೋನವನ್ನು ಪೂರ್ಣ ಬೆಂಬಲಿಸುತ್ತದೆ ಎಂದು ಹೇಳಿದರು.
ತಮ್ಮ ವರ್ಚುವಲ್ ಭಾಷಣದ ವೇಳೆ ಪ್ರಧಾನ ಮಂತ್ರಿಯವರು 2026 ಅನ್ನು ಆಸಿಯಾನ್–ಭಾರತ ಕಡಲ ಸಹಕಾರ ವರ್ಷವೆಂದು ಘೋಷಿಸಿದರು. ಆಸಿಯಾನ್ ಸಮುದಾಯ ದೃಷ್ಟಿ 2045” ಮತ್ತು “ಅಭಿವೃದ್ಧಿ ಹೊಂದಿದ ಭಾರತ 2047” ರ ಗುರಿಗಳು ಸೇರಿ ಮಾನವಕೋಟಿಗೆ ಉಜ್ವಲ ಭವಿಷ್ಯವನ್ನು ರೂಪಿಸುತ್ತವೆ. ಅನಿಶ್ಚಿತತೆಯ ಈ ಸಮಯದಲ್ಲಿಯೂ ಭಾರತ–ಆಸಿಯಾನ್ ಪಾಲುದಾರಿಕೆ ನಿರಂತರ ಪ್ರಗತಿಯಲ್ಲಿದೆ ಮತ್ತು ಇದು ಜಾಗತಿಕ ಸ್ಥಿರತೆ ಮತ್ತು ಅಭಿವೃದ್ಧಿಗೆ ಬಲವಾದ ಅಡಿಪಾಯವಾಗಿದೆ ಎಂದರು.
ಪ್ರತಿಯೊಂದು ಬಿಕ್ಕಟ್ಟಿನಲ್ಲಿಯೂ ಭಾರತ ತನ್ನ ಆಸಿಯಾನ್ ಸ್ನೇಹಿತರ ಜೊತೆಯಲ್ಲಿದೆ. ಮಾನವೀಯ ನೆರವು, ವಿಪತ್ತು ನಿರ್ವಹಣೆ, ಕಡಲ ಭದ್ರತೆ ಮತ್ತು ನೀಲಿ ಆರ್ಥಿಕತೆ ಕ್ಷೇತ್ರಗಳಲ್ಲಿ ನಮ್ಮ ಸಹಕಾರ ವೇಗವಾಗಿ ವಿಸ್ತರಿಸುತ್ತಿದೆ, ಶಿಕ್ಷಣ, ಪ್ರವಾಸೋದ್ಯಮ, ವಿಜ್ಞಾನ–ತಂತ್ರಜ್ಞಾನ, ಆರೋಗ್ಯ, ಹಸಿರು ಇಂಧನ ಮತ್ತು ಸೈಬರ್ ಭದ್ರತೆ ಕ್ಷೇತ್ರಗಳಲ್ಲಿ ಸಹಭಾಗಿತ್ವವನ್ನು ಬಲಪಡಿಸುವ ಅಗತ್ಯವನ್ನು ಒತ್ತಿ ಹೇಳಿದರು. ಜೊತೆಗೆ, ಸಾಂಸ್ಕೃತಿಕ ಪರಂಪರೆ ಸಂರಕ್ಷಣೆ ಮತ್ತು ಜನರಿಂದ ಜನರಿಗೆ ಸಂಬಂಧ ಬಲಪಡಿಸುವ ದಿಕ್ಕಿನಲ್ಲಿ ಭಾರತ–ಆಸಿಯಾನ್ ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa