ಬಿಹಾರ ಮತ್ತೆ ಎನ್‌ಡಿಎ ಸರ್ಕಾರವನ್ನು ಬಯಸುತ್ತಿದೆ : ಮೋದಿ
ಪಾಟ್ನಾ, 24 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಬಿಹಾರ ವಿಧಾನ ಸಭಾ ಚುನಾವಣೆಗೆ ಎನ್‌ಡಿಎ ಪ್ರಚಾರಕ್ಕೆ ಶುಕ್ರವಾರ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ಸಮಷ್ಟಿಪುರದ ಕರ್ಪೂರಿ ಗ್ರಾಮಕ್ಕೆ ಭೇಟಿ ನೀಡಿ ದಿವಂಗತ ಭಾರತ ರತ್ನ ಕರ್ಪೂರಿ ಠಾಕೂರ್ ಅವರಿಗೆ ಪುಷ್ಪ ನಮನ ಸಲ್ಲಿಸಿದರು. ನಂತರ ನಡೆದ ಸಾರ್ವಜನಿಕ
Pm


ಪಾಟ್ನಾ, 24 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಬಿಹಾರ ವಿಧಾನ ಸಭಾ ಚುನಾವಣೆಗೆ ಎನ್‌ಡಿಎ ಪ್ರಚಾರಕ್ಕೆ ಶುಕ್ರವಾರ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ಸಮಷ್ಟಿಪುರದ ಕರ್ಪೂರಿ ಗ್ರಾಮಕ್ಕೆ ಭೇಟಿ ನೀಡಿ ದಿವಂಗತ ಭಾರತ ರತ್ನ ಕರ್ಪೂರಿ ಠಾಕೂರ್ ಅವರಿಗೆ ಪುಷ್ಪ ನಮನ ಸಲ್ಲಿಸಿದರು. ನಂತರ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಅವರು, “ಬಿಹಾರದಲ್ಲಿ ಮತ್ತೊಮ್ಮೆ ಬಲಿಷ್ಠ ಎನ್‌ಡಿಎ ಸರಕಾರವನ್ನು ಜನತೆ ಬಯಸುತ್ತಿದ್ದಾರೆ. ಉದ್ದೇಶಗಳು ಸ್ಪಷ್ಟವಾದಾಗ ಮತ್ತು ನೀತಿಗಳು ರಾಷ್ಟ್ರೀಯ ಹಿತಾಸಕ್ತಿಯಲ್ಲಿದ್ದರೆ, ಜನರು ಆಶೀರ್ವದಿಸುತ್ತಾರೆ” ಎಂದು ಹೇಳಿದರು.

ಪ್ರಧಾನಿ ಮೋದಿ ತೇಜಸ್ವಿ ಯಾದವ್ ಮತ್ತು ಲಾಲು ಯಾದವ್ ವಿರುದ್ಧವೂ ವಾಗ್ದಾಳಿ ನಡೆಸಿ. “ಬಿಹಾರ ಮತ್ತೆ ಜಂಗಲ್ ರಾಜ್‌ಗೆ ಹೋಗುವುದಿಲ್ಲ. ಜಾಮೀನಿನ ಮೇಲೆ ಇರುವವರು ‘ಜನನಾಯಕ’ ಬಿರುದನ್ನು ಕದಿಯುತ್ತಿದ್ದಾರೆ, ಆದರೆ ನಾವು ಇದನ್ನು ಸಹಿಸುವುದಿಲ್ಲ ಎಂದ ಅವರು, ನಿತೀಶ್ ಕುಮಾರ್ ನೇತೃತ್ವದಲ್ಲಿ ಅಭಿವೃದ್ಧಿಯ ಹೊಸ ಯುಗ ಪ್ರಾರಂಭವಾಗಿದೆ. ವಿದ್ಯುತ್, ನೀರು, ಅನಿಲ, ಉದ್ಯೋಗ ಮತ್ತು ಮೂಲಭೂತ ಸೌಲಭ್ಯಗಳ ಮೇಲೆ ಕೆಲಸ ನಡೆಯುತ್ತಿದೆ” ಎಂದು ಹೇಳಿದರು.

ಎನ್‌ಡಿಎಗೆ ಇತರ ರಾಜ್ಯಗಳಲ್ಲಿ ಲಭ್ಯವಾದ ಜನಮಾನದ ಉದಾಹರಣೆಗಳನ್ನು ನೀಡಿ, ಮಹಾರಾಷ್ಟ್ರ, ಹರಿಯಾಣ, ಗುಜರಾತ್, ಉತ್ತರಾಖಂಡ್ ಮತ್ತು ಉತ್ತರ ಪ್ರದೇಶದಲ್ಲಿ ಎನ್‌ಡಿಎ ಬಲಿಷ್ಠ ಫಲಿತಾಂಶ ಪಡೆದಿದೆ ಎಂದು ಉಲ್ಲೇಖಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande