ಚಿತ್ರದುರ್ಗ, 22 ಅಕ್ಟೋಬರ್ (ಹಿ.ಸ.):
ಆ್ಯಂಕರ್:
ಚಿತ್ರದುರ್ಗ ತಾಲ್ಲೂಕಿನ ಐನಹಳ್ಳಿ ಗ್ರಾಮದ ಪ್ರಮೋದ.ಎಂ ತಂದೆ ದಿ.ಮಹಂತೇಶ್.ವಿ (35) ಕಾಣೆಯಾದ ಕುರಿತು ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಮೋದ 5 ಅಡಿ ಎತ್ತರವಿದ್ದು, ದುಂಡುಮುಖ, ಗೋಧಿ ಮೈಬಣ್ಣ ಹೊಂದಿದ್ದಾನೆ. ಎಡ ಮೊಣಕಾಲಿನ ಕೆಳಭಾಗದಲ್ಲಿ ಕರಿಮಚ್ಚೆ ಇದ್ದು, ಹೊಟ್ಟೆಯ ಕೆಳಭಾಗದಲ್ಲಿ ಅಪರೇಷನ್ ಮಾಡಿದ ಗುರುತು ಇರುತ್ತದೆ. ಪ್ರಮೋದ ಜಿರಾಯ್ತಿ ಕೆಲಸ ಮಾಡಿಕೊಂಡಿದ್ದು, ಮನೆಯಿಂದ ತೆರಳುವಾಗ ಲೈಟ್ ಪಿಂಕ್ ಕಲರ್ ಷರ್ಟ್, ಗ್ರೀನ್ ಕಲರ್ ಪ್ಯಾಂಟ್ ಧರಿಸಿರುತ್ತಾರೆ. ಕನ್ನಡ, ಹಿಂದಿ, ತೆಲುಗು, ತಮಿಳು ಭಾಷೆಯನ್ನು ಮಾತನಾಡುತ್ತಾನೆ.
ಗುರುತು ಪತ್ತೆಯಾದವರು ಕೋಟೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08194222933, 9480803145, ಪೊಲೀಸ್ ಉಪಾಧೀಕ್ಷಕರ ದೂರವಾಣಿ ಸಂಖ್ಯೆ 08194222430, 9480803120, ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 08194222782 ಗೆ ಕರೆ ಮಾಡುವಂತೆ ಕೋರಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa