ಧರಣಿ ಸ್ಥಳದಲ್ಲಿಯೇ ಕರಾಳ ದೀಪಾವಳಿ
ವಿಜಯಪುರ, 22 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಕುದರಿಸಾಲವಾಡಗಿ ಗ್ರಾಮದಲ್ಲಿ ರಸ್ತೆ ತೆರವು ಕಾರ್ಯಾಚರಣೆಯಲ್ಲಿ ಮನೆ ಕಳೆದುಕೊಂಡ ನೊಂದ ಕುಟುಂಬದವರು ಪಟ್ಟಣದಲ್ಲಿ ಕಳೆದ ಆರು ದಿನಗಳಿಂದ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಸ್ಥಳದಲ್ಲಿಯೇ ದೀಪ ಬೆ
ಧರಣಿ


ವಿಜಯಪುರ, 22 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಕುದರಿಸಾಲವಾಡಗಿ ಗ್ರಾಮದಲ್ಲಿ ರಸ್ತೆ ತೆರವು ಕಾರ್ಯಾಚರಣೆಯಲ್ಲಿ ಮನೆ ಕಳೆದುಕೊಂಡ ನೊಂದ ಕುಟುಂಬದವರು ಪಟ್ಟಣದಲ್ಲಿ ಕಳೆದ ಆರು ದಿನಗಳಿಂದ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಸ್ಥಳದಲ್ಲಿಯೇ ದೀಪ ಬೆಳಗಿ ಕರಾಳ ದೀಪಾವಳಿ ಆಚರಿಸಿದರು.

ಜಿಲ್ಲಾ ಮಹಿಳಾ ಘಟಕದ ಕಾಂಗ್ರೆಸ್ ಅಧ್ಯಕ್ಷರಾದ ರಮಿಜಾ ನದಾಫ್ ಮಾತನಾಡಿ, ಧರಣಿ ಮಾಡುತ್ತಿರುವ ನಿರಾಶ್ರಿತರಿಗೆ ನಿಮಗೆ ನ್ಯಾಯ ಸಿಗುವವರೆಗೂ ನಾವು ನಿಮ್ಮ ಜೊತೆ ಇರುತ್ತವೆ ಎಂದು ಭರವಸೆ ನೀಡಿದರು.

ಇದೇ ಸಮಯದಲ್ಲಿ ಅಶೋಕ್ ದೇಸಾಯಿ ಅರವಿಂದ್ ಕುಲಕರ್ಣಿ ಗುರುರಾಜ್ ಗುಡಿಮನಿ ನಜೀರ್ ಗುಡ್ನಾಳ ಜಗದೇವಿ ಗುಂಡಳ್ಳಿ ರುಕ್ಮಿಣಿ ರಾಥೋಡ್ ಅನೇಕ ಜನರು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande