ಪಟಿಯಾಲದ ಮಾಜಿ ಮೇಯರ್ ಸಂಜೀವ್ ಶರ್ಮಾ ಮತ್ತೆ ಕಾಂಗ್ರೆಸ್‌ಗೆ ಸೇರ್ಪಡೆ
ನವದೆಹಲಿ, 19 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಪಂಜಾಬನ ಪಟಿಯಾಲದ ಮಾಜಿ ಮೇಯರ್ ಸಂಜೀವ್ ಶರ್ಮಾ ಭಾನುವಾರ ಕಾಂಗ್ರೆಸ್ ಪಕ್ಷಕ್ಕೆ ಮರುಸೇರ್ಪಡೆಯಾದರು. ಅವರನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ಪಂಜಾಬ್ ಉಸ್ತುವಾರಿ ಭೂಪೇಶ್ ಬಾಘೇಲ್ ಕಾಂಗ್ರೆಸ್ ಸದಸ್ಯತ್ವ ನೀಡಿ ಬರಮಾಡಿಕೊ
Cong join


ನವದೆಹಲಿ, 19 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಪಂಜಾಬನ ಪಟಿಯಾಲದ ಮಾಜಿ ಮೇಯರ್ ಸಂಜೀವ್ ಶರ್ಮಾ ಭಾನುವಾರ ಕಾಂಗ್ರೆಸ್ ಪಕ್ಷಕ್ಕೆ ಮರುಸೇರ್ಪಡೆಯಾದರು. ಅವರನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ಪಂಜಾಬ್ ಉಸ್ತುವಾರಿ ಭೂಪೇಶ್ ಬಾಘೇಲ್ ಕಾಂಗ್ರೆಸ್ ಸದಸ್ಯತ್ವ ನೀಡಿ ಬರಮಾಡಿಕೊಂಡರು.

ಶರ್ಮಾ 2018ರಿಂದ 2021ರವರೆಗೆ ಪಟಿಯಾಲ ಮುನ್ಸಿಪಲ್ ಕಾರ್ಪೊರೇಷನ್‌ನ ಮೇಯರ್ ಆಗಿ ಸೇವೆ ಸಲ್ಲಿಸಿದ್ದಾರೆ. ಅಮರಿಂದರ್ ಸಿಂಗ್ ಅವರ ಆಪ್ತ ಬೆಂಬಲಿಗರಾಗಿದ್ದ ಶರ್ಮಾ 2021ರಲ್ಲಿ ಕಾಂಗ್ರೆಸ್ ಬಿಟ್ಟು ಪಂಜಾಬ್ ಲೋಕ ಕಾಂಗ್ರೆಸ್ ಸೇರಿದ್ದರು. ಅವರ ಮರಳುವಿಕೆಯನ್ನು ಪಂಜಾಬ್ ಕಾಂಗ್ರೆಸ್ ಘಟಕ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande