ನವದೆಹಲಿ, 18 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಲಿಂಗಾಯತ ಆಧ್ಯಾತ್ಮಿಕ ಗುರು ಅದೃಶ್ಯ ಕಾಡಸಿದ್ಧೇಶ್ವರ ಮಹಾರಾಜರ ವಿಜಯಪುರ ಪ್ರವೇಶವನ್ನು ನಿಷೇಧಿಸಿದ ಕರ್ನಾಟಕ ಸರ್ಕಾರದ ನಿರ್ಧಾರವನ್ನು ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ಖಂಡಿಸಿದ್ದು, ಈ ನಿರ್ಧಾರವನ್ನು ತಕ್ಷಣ ಹಿಂಪಡೆಯಬೇಕೆಂದು ಒತ್ತಾಯಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ವಿಎಚ್‌ಪಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಬಜರಂಗ್ ಬಾಗ್ಡಾ “ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕನೇರಿಯಲ್ಲಿರುವ ಕಾಡಸಿದ್ಧೇಶ್ವರ ಮಠವು ಸುಮಾರು 1300 ವರ್ಷಗಳ ಇತಿಹಾಸವಿರುವ ಪವಿತ್ರ ಮಠವಾಗಿದ್ದು, ವೀರಶೈವ ಲಿಂಗಾಯತ ಸಮುದಾಯದ ನಂಬಿಕೆಯ ಕೇಂದ್ರವಾಗಿದೆ. ಆದರೆ, ಕರ್ನಾಟಕ ಸರ್ಕಾರವು ಅದರ ಆಧ್ಯಾತ್ಮಿಕ ನಾಯಕ ದೃಶ್ಯಂ ಕಾಡಸಿದ್ಧೇಶ್ವರ ಮಹಾರಾಜರ ರಾಜ್ಯ ಪ್ರವಾಸದ ಮೇಲೆ ಅನವಶ್ಯಕ ನಿರ್ಬಂಧ ಹೇರಿದೆ,” ಎಂದು ಆರೋಪಿಸಿದರು.
ಮಠಾಧೀಶರಾದ ದೃಶ್ಯಂ ಕಾಡಸಿದ್ಧೇಶ್ವರರಿಗೆ ತಮ್ಮದೇ ಮಠಗಳಿಗೆ ಭೇಟಿ ನೀಡುವುದನ್ನು ತಡೆಯಲಾಗುತ್ತಿದೆ. ಇದು ಹಿಂದೂ ಸಮುದಾಯದ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ನಡೆದ ಅನ್ಯಾಯ ಹಾಗೂ ಅತಿಕ್ರಮಣವಾಗಿದ್ದು, ಇಡೀ ವೀರಶೈವ ಲಿಂಗಾಯತ ಸಮುದಾಯದ ಗೌರವಕ್ಕೆ ಧಕ್ಕೆಯಾಗಿದೆ,” ಎಂದು ಹೇಳಿದರು.
“ರಾಜ್ಯ ಸರ್ಕಾರವು ಜಿಲ್ಲಾ ಮಟ್ಟದ ನಿಷೇಧ ಆದೇಶವನ್ನು ತಕ್ಷಣವೇ ಹಿಂಪಡೆದು, ಹಿಂದೂ ಸಂತರ ಸಂಚಾರ ಅಥವಾ ಧಾರ್ಮಿಕ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡಬಾರದು. ಧರ್ಮಗುರುಗಳ ಮೇಲೆ ಹೇರಲಾಗಿರುವ ಈ ರೀತಿಯ ನಿರ್ಬಂಧಗಳು ಮತೀಯ ಸಹಿಷ್ಣುತೆ ಮತ್ತು ಸಂವಿಧಾನಾತ್ಮಕ ಹಕ್ಕುಗಳಿಗೆ ವಿರುದ್ಧವಾಗಿವೆ ಬಾಗ್ಡಾ ಆರೋಪಿಸಿದ್ದಾರೆ.
ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿಗಳು ಮಹಾರಾಷ್ಟ್ರದ ಕೊಲ್ಹಾಪುರದ ಕನೇರಿ ಮಠದ ಮಹಾಂತರು, ಹಾಗೂ ವೀರಶೈವ ಲಿಂಗಾಯತ ಸಮುದಾಯದ ಪ್ರಖ್ಯಾತ ಆಧ್ಯಾತ್ಮಿಕ ಮುಖಂಡರು. ಧಾರ್ಮಿಕ ಮತಾಂತರ ಮತ್ತು ಸಾಮಾಜಿಕ ವಿಷಯಗಳಲ್ಲಿ ಅವರ ವಿವಾದಾತ್ಮಕ ಹೇಳಿಕೆಗಳ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾಡಳಿತವು ಕಳೆದ ವಾರ ಅವರ ಪ್ರವೇಶವನ್ನು ಎರಡು ತಿಂಗಳ ಕಾಲ ನಿಷೇಧಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa