ನವದೆಹಲಿ, 18 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ದೇಶದಾದ್ಯಂತ ಧನ್ತೇರಸ್ ಹಬ್ಬದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಾಮಾಜಿಕ ಮಾಧ್ಯಮದ ಮೂಲಕ ಎಲ್ಲ ಭಾರತೀಯರಿಗೆ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
ಅವರು ತಮ್ಮ ಸಂದೇಶದಲ್ಲಿ “ಎಲ್ಲರಿಗೂ ಸಂತೋಷ, ಆರೋಗ್ಯ ಮತ್ತು ಅದೃಷ್ಟ ಸಿಗಲಿ” ಎಂದು ಹಾರೈಸಿದ್ದಾರೆ.
ಹಬ್ಬದ ಈ ವಿಶೇಷ ಸಂದರ್ಭದಲ್ಲಿ ಭಗವಾನ್ ಧನ್ವಂತರಿ ಎಲ್ಲರ ಮೇಲೆ ತಮ್ಮ ಹೇರಳವಾದ ಆಶೀರ್ವಾದವನ್ನು ಕರುಣಿಸಲಿ ಎಂದು ಪ್ರಧಾನಿ ಶುಭಾಶಯ ಕೋರಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa