ನವದೆಹಲಿ, 18 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಶನಿವಾರ 30 ಹೆಚ್ಚುವರಿ ಏರ್‌ಬಸ್ A350-900 ವೈಡ್-ಬಾಡಿ ವಿಮಾನಗಳನ್ನು ಖರೀದಿಸಲು ಏರ್‌ಬಸ್ ಕಂಪನಿಯೊಂದಿಗೆ ಹೊಸ ಒಪ್ಪಂದಕ್ಕೆ ಸಹಿ ಹಾಕಿದೆ. ಇದರೊಂದಿಗೆ ಇಂಡಿಗೋ ಸಂಸ್ಥೆಯ ವಿಮಾನಗಳ ಖರೀದಿ ಸಂಖ್ಯೆ ಒಟ್ಟು 60 ಕ್ಕೆ ಏರಿವೆ.
ಕಂಪನಿಯ ಪ್ರಕಟಣೆಯ ಪ್ರಕಾರ, ಈ ಒಪ್ಪಂದವು ಏರ್‌ಬಸ್‌ನೊಂದಿಗೆ ಜೂನ್‌ನಲ್ಲಿ ಸಹಿ ಮಾಡಿದ ತಿಳುವಳಿಕೆ ಪತ್ರದ ಮುಂದುವರಿಕೆಯಾಗಿದೆ.
ಇಂಡಿಗೋ ಪ್ರಸ್ತುತ 400 ಕ್ಕೂ ಹೆಚ್ಚು ವಿಮಾನಗಳ ಫ್ಲೀಟ್ ಅನ್ನು ಹೊಂದಿದ್ದು, ತನ್ನ ಅಂತಾರಾಷ್ಟ್ರೀಯ ಸೇವಾ ಜಾಲವನ್ನು ವೇಗವಾಗಿ ವಿಸ್ತರಿಸುತ್ತಿದೆ. ಸಂಸ್ಥೆಯು ಮುಂದಿನ ದಿನಗಳಲ್ಲಿ ಇನ್ನೂ 40 A350 ವಿಮಾನಗಳ ಖರೀದಿ ಆಯ್ಕೆಯನ್ನು ಕಾಯ್ದುಕೊಂಡಿದೆ ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa