ವಿಜಯಪುರ ನಗರ ಸಂಪೂರ್ಣ ಸ್ಥಬ್ಧ ; ಗುಲಾಬಿ ಹೂವು ನೀಡಿ ಮನವಿ
ವಿಜಯಪುರ, 16 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಸುಪ್ರೀಂ ಕೊರ್ಟ್ ನ್ಯಾಯಮೂರ್ತಿ ಗವಾಯಿ ಅವರ ಮೇಲೆ ವಕೀಲ ಶೂ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ಖಂಡಿಸಿ ಇಂದು ವಿಜಯಪುರ ನಗರ ಬಂದ್ ಗೆ ಕರೆ ನೀಡಲಾಗಿದೆ. ನಾನಾ ಸಂಘಟನೆಗಳು ಬಂದ್ ಹಿನ್ನಲೆಯಲ್ಲಿ ನಗರದಲ್ಲಿ ಬಸ್ ಸಂಚಾರ ಸಂಪೂರ್ಣ ಸ್ಥಬ್ಧಗೊಂ
ಬಂದ್


ವಿಜಯಪುರ, 16 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಸುಪ್ರೀಂ ಕೊರ್ಟ್ ನ್ಯಾಯಮೂರ್ತಿ ಗವಾಯಿ ಅವರ ಮೇಲೆ ವಕೀಲ ಶೂ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ಖಂಡಿಸಿ ಇಂದು ವಿಜಯಪುರ ನಗರ ಬಂದ್ ಗೆ ಕರೆ ನೀಡಲಾಗಿದೆ.

ನಾನಾ ಸಂಘಟನೆಗಳು ಬಂದ್ ಹಿನ್ನಲೆಯಲ್ಲಿ ನಗರದಲ್ಲಿ ಬಸ್ ಸಂಚಾರ ಸಂಪೂರ್ಣ ಸ್ಥಬ್ಧಗೊಂಡಿದೆ.

ವಿಜಯಪುರ ನಗರದ ಕೇಂದ್ರೀಯ ಬಸ್ ನಿಲ್ದಾಣಕ್ಕೆ ಬಸ್ ಆಗಮಿಸದ ಹಿನ್ನೆಲೆಯಲ್ಲಿ ಕೇಂದ್ರೀಯ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಕೆಲ ಪ್ರಯಾಣಿಕರು ಬಸ್ ಗಳಿಗಾಗಿ ಕಾದು ಕುಳಿತರು.

ಹೊರ ಜಿಲ್ಲೆಯಿಂದ ಆಗಮಿಸುತ್ತಿರುವ ಬಸ್ ಗಳಿಗೆ ನಗರದ ಹೊರ ವಲಯದಿಂದಲೇ ಸಾರಿಗೆ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ವಾಪಸ್ ಕಳಿಸುತ್ತಿರುವದು ಕಂಡು ಬಂತು.

ಬಸ್ ಸಂಚಾರ ಇರದೇ ಇದ್ದಿದ್ದರಿಂದ ಆಟೋಗಳಿಗೆ ಭಾರಿ ಬೇಡಿಕೆ ಎನ್ನುವಂತಾಗಿತ್ತು.

ಬಂದ್ ಹಿನ್ನಲೆಯಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ವಿನೂತನ ಮನವಿ ಮಾಡಲಾಯಿತು. ಅಂಗಡಿ ಮುಂಗಟ್ಟು ಹಾಗೂ ಬಸ್ ಬಂದ್ ಮಾಡುವಂತೆ ಮನವಿ ಮಾಡಿದರು.

ವಿನೂತನ ರೀತಿಯಲ್ಲಿ ಗುಲಾಬಿ ಹೂ ಕೊಟ್ಟು ಮನವಿ ಮಾಡಿದರು. ಸಂವಿಧಾನ ಉಳಿವಿಗಾಗಿ ಇಂದು ಬಂದ್ ಮಾಡಲಾಗುತ್ತಿದೆ. ಇಂದಿನ‌ ಬಂದ್ ಗೆ ಸ್ವಯಂ ಪ್ರೇರಿತರಾಗಿ ಸಹಕರಿಸಿ ಎಂದು ಮನವಿ ಮಾಡಿದರು. ವಿಜಯಪುರ ನಗರದ ಬಸ್ ನಿಲ್ದಾಣ ಗಾಂಧಿ ವೃತ್ತದ ಬಳಿ ಮನವಿ ಮಾಡಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande