ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ; ವಸತಿ ನಿಲಯ ಕಟ್ಟಡ ಬಾಡಿಗೆಗೆ ಬೇಕಾಗಿದೆ
ಬಳ್ಳಾರಿ, 16 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಬಳ್ಳಾರಿ ನಗರದ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ನಂ-4 ನಿಲಯದಲ್ಲಿನ 100 ಮಕ್ಕಳ ವಾಸಕ್ಕೆ, ಸರ್ಕಾರಿ ಬಾಲಕೀಯರ ವಸತಿ ನಿಲಯ ನಂ-2 ನಿಲಯದಲ್ಲಿನ 100 ಮಕ್ಕಳ ವಾಸಕ್ಕೆ ಹಾಗೂ ಕಂಪ್ಲಿ ಪಟ್ಟ
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ; ವಸತಿ ನಿಲಯ ಕಟ್ಟಡ ಬಾಡಿಗೆಗೆ ಬೇಕಾಗಿದೆ


ಬಳ್ಳಾರಿ, 16 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಬಳ್ಳಾರಿ ನಗರದ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ನಂ-4 ನಿಲಯದಲ್ಲಿನ 100 ಮಕ್ಕಳ ವಾಸಕ್ಕೆ, ಸರ್ಕಾರಿ ಬಾಲಕೀಯರ ವಸತಿ ನಿಲಯ ನಂ-2 ನಿಲಯದಲ್ಲಿನ 100 ಮಕ್ಕಳ ವಾಸಕ್ಕೆ ಹಾಗೂ ಕಂಪ್ಲಿ ಪಟ್ಟಣದ ಸರ್ಕಾರಿ ಬಾಲಕೀಯರ ವಸತಿ ನಿಲಯದಲ್ಲಿನ 100 ಮಕ್ಕಳ ವಾಸಕ್ಕೆ ಅನುಕೂಲಕರವಾಗಿರುವ ಕಟ್ಟಡವಿದ್ದಲ್ಲಿ ಬಾಡಿಗೆ ನೀಡಲು ಆಸಕ್ತ ಮಾಲೀಕರು ಸಂಪರ್ಕಿಸಬಹುದು ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶಾಷು ಮೋದಿನ್ ತಿಳಿಸಿದ್ದಾರೆ.

ವಿಶಾಲವಾದ ಕೊಠಡಿಗಳು (ಒಂದು ಕೊಠಡಿಗೆ 5 ವಿದ್ಯಾರ್ಥಿಗಳಂತೆ 20 ಕೊಠಡಿಗಳು) ಅಡುಗೆ ಕೋಣೆ, ಡಾರ್ಮೆಟರಿ, ಕುಡಿಯುವ ನೀರು, ಬಳಸುವ ನೀರು ಹಾಗೂ ಶೌಚಾಲಯ ಮತ್ತು ಸ್ನಾನಗೃಹ ಇರುವ ಬಾಡಿಗೆ ಕಟ್ಟಡ ಬಳ್ಳಾರಿ ಮತ್ತು ಕಂಪ್ಲಿ ನಗರದಲ್ಲಿ ಬೇಕಾಗಿರುತ್ತದೆ.

ಆಸಕ್ತ ಕಟ್ಟಡ ಮಾಲೀಕರು ಕಟ್ಟಡದ ಸೂಕ್ತ ದಾಖಲಾತಿಗಳೊಂದಿಗೆ ನಗರದ ನಲ್ಲಚೆರವು ಪ್ರದೇಶದ ವಾಲ್ಮೀಕಿ ಭವನದ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೂ.08392-242453 ಅಥವಾ ಮೊ.9972451535 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande