ವೆನೆಜುವೆಲಾ ಕರಾವಳಿಯಲ್ಲಿ ಆರು ಜನರನ್ನು ಹತ್ಯೆ ಮಾಡಿದ ಅಮೆರಿಕ ಪಡೆ
ವಾಷಿಂಗ್ಟನ್, 15 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ವೆನೆಜುವೆಲಾ ಅಂತಾರಾಷ್ಟ್ರೀಯ ಕರಾವಳಿ ದೋಣಿಯಲ್ಲಿದ್ದ ಆರು ಜನರನ್ನು ಅಮೆರಿಕ ಪಡೆಗಳು ಹತ್ಯೆ ಮಾಡಿವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ಜನರು ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದರು ಎಂದು ಅವರು ಆರೋಪಿಸಿದ್ದಾ
Trump


ವಾಷಿಂಗ್ಟನ್, 15 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ವೆನೆಜುವೆಲಾ ಅಂತಾರಾಷ್ಟ್ರೀಯ ಕರಾವಳಿ ದೋಣಿಯಲ್ಲಿದ್ದ ಆರು ಜನರನ್ನು ಅಮೆರಿಕ ಪಡೆಗಳು ಹತ್ಯೆ ಮಾಡಿವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ಜನರು ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ.

ಅಧ್ಯಕ್ಷ ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ ಮಾಹಿತಿಯ ಪ್ರಕಾರ, ಇದು ಸೆಪ್ಟೆಂಬರ್ 2ರಿಂದ ಅಮೆರಿಕ ಪಡೆಗಳು ಕೈಗೊಂಡ ಐದನೇ ಕ್ರಮವಾಗಿದೆ. “ದೋಣಿಯು ಮಾದಕವಸ್ತುಗಳನ್ನು ಸಾಗಿಸುತ್ತಿದೆ ಎಂದು ಗುಪ್ತಚರ ಇಲಾಖೆ ದೃಢಪಡಿಸಿದೆ,” ಎಂದು ಟ್ರಂಪ್ ಹೇಳಿದ್ದಾರೆ.

ಟ್ರಂಪ್ 33 ಸೆಕೆಂಡುಗಳ ವೈಮಾನಿಕ ಕಣ್ಗಾವಲು ದೃಶ್ಯವನ್ನೂ ಹಂಚಿಕೊಂಡಿದ್ದಾರೆ. ಅದರಲ್ಲಿ ಒಂದು ಸಣ್ಣ ದೋಣಿ ಸಮುದ್ರದಲ್ಲಿ ತೇಲುತ್ತಿರುವುದು, ಬಳಿಕ ಕ್ಷಿಪಣಿ ಡಿಕ್ಕಿ ಹೊಡೆದು ಸ್ಫೋಟಗೊಳ್ಳುವುದು ಕಾಣಿಸುತ್ತದೆ.

ಆದರೆ ದಿ ನ್ಯೂಯಾರ್ಕ್ ಟೈಮ್ಸ್ ವರದಿ ಪ್ರಕಾರ, ಟ್ರಂಪ್ ನೀಡಿದ ಆರೋಪಕ್ಕೆ ಯಾವುದೇ ಪುರಾವೆಗಳನ್ನು ಮಂಡಿಸಲಾಗಿಲ್ಲ. ಕೊಲ್ಲಲ್ಪಟ್ಟವರ ರಾಷ್ಟ್ರೀಯತೆ, ಅವರ ಗುರುತು ಅಥವಾ ಯಾವುದೇ ನಿರ್ದಿಷ್ಟ ಡ್ರಗ್ ಕಾರ್ಟೆಲ್‌ಗಳ ಸಂಪರ್ಕದ ಬಗ್ಗೆ ಅಧ್ಯಕ್ಷರು ವಿವರ ನೀಡಿಲ್ಲ.

ಇತ್ತೀಚಿನ ಘಟನೆಯೊಂದಿಗೆ ಅಮೆರಿಕ ಪಡೆಗಳ ಕ್ರಮದಿಂದ ಸಾವಿಗೀಡಾದವರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ ಎಂದು ಶ್ವೇತಭವನ ಮೂಲಗಳು ತಿಳಿಸಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande