ಮೂವರು ನೂತನ ರಾಜ್ಯ ಮಾಹಿತಿ ಆಯುಕ್ತರ ನೇಮಕ
ಬೆಂಗಳೂರು, 15 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಕರ್ನಾಟಕ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ರಾಜ್ಯ ಮಾಹಿತಿ ಆಯೋಗಕ್ಕೆ ಮೂವರು ಹೊಸ ರಾಜ್ಯ ಮಾಹಿತಿ ಆಯುಕ್ತರನ್ನು ನೇಮಿಸುವ ಕುರಿತು ಅಧಿಸೂಚನೆಗೆ ಅಂಕಿತ ಹಾಕಿದ್ದಾರೆ. ಮಾಹಿತಿ ಹಕ್ಕು ಕಾಯ್ದೆ, 2005ರ ಕಲಂ 15(3)ರ ಪ್ರಕಾರ ಸರಕಾರ ಹೊರಡಿಸಿ
Appointment


ಬೆಂಗಳೂರು, 15 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಕರ್ನಾಟಕ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ರಾಜ್ಯ ಮಾಹಿತಿ ಆಯೋಗಕ್ಕೆ ಮೂವರು ಹೊಸ ರಾಜ್ಯ ಮಾಹಿತಿ ಆಯುಕ್ತರನ್ನು ನೇಮಿಸುವ ಕುರಿತು ಅಧಿಸೂಚನೆಗೆ ಅಂಕಿತ ಹಾಕಿದ್ದಾರೆ.

ಮಾಹಿತಿ ಹಕ್ಕು ಕಾಯ್ದೆ, 2005ರ ಕಲಂ 15(3)ರ ಪ್ರಕಾರ ಸರಕಾರ ಹೊರಡಿಸಿದ ಈ ಅಧಿಸೂಚನೆಯನ್ವಯ, ಡಾ. ರಿಚರ್ಡ್ ವಿನ್ಸೆಂಟ್ ಡಿ’ಸೋಜಾ ಮತ್ತು ಡಾ. ಮಹೇಶ್ ವಾಳ್ವೇಕರ್ ಅವರನ್ನು ಬೆಂಗಳೂರು ಪೀಠದ ರಾಜ್ಯ ಮಾಹಿತಿ ಆಯುಕ್ತರಾಗಿ ಹಾಗೂ ಬಿ. ವಂಕಟ ಸಿಂಗ್ ಕಲಬುರ್ಗಿ ಪೀಠದ ರಾಜ್ಯ ಮಾಹಿತಿ ಆಯುಕ್ತರಾಗಿ ನೇಮಕಗೊಂಡಿದ್ದಾರೆ.

ಅಧಿಸೂಚನೆಯಲ್ಲಿ ಆಯುಕ್ತರ ಹುದ್ದೆಯ ಅವಧಿ, ವೇತನ, ಭತ್ಯೆ ಹಾಗೂ ಇತರ ಸೇವಾ ಷರತ್ತುಗಳು ಮಾಹಿತಿ ಹಕ್ಕು ಕಾಯ್ದೆ, 2005ರ ಕಲಂ 16ರೊಂದಿಗೆ ಓದಿದಂತೆ, 2019ರ ರಾಜ್ಯ ಮಾಹಿತಿ ಆಯೋಗದ ನಿಯಮಾವಳಿಗಳ ಪ್ರಕಾರ ಅನ್ವಯವಾಗಲಿವೆ ಎಂದು ತಿಳಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande