ದೀಪಾವಳಿ ಆಚರಣೆಗೆ ಡಾ.ನೀರಜ್ ಪಾಟೀಲ ದಂಪತಿಗೆ ಬ್ರಿಟನ್ ಪ್ರಧಾನಿ ಆಹ್ವಾನ
ಲಂಡನ್, 15 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಬ್ರಿಟಿಷ್ ಹಿಂದೂ ಸಮುದಾಯದೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸುವ ಉದ್ದೇಶದಿಂದ ಯುನೈಟೆಡ್ ಕಿಂಗ್‌ಡಮ್‌ನ ಪ್ರಧಾನ ಮಂತ್ರಿ ಕೀರ್ ಸ್ಟಾರ್ಮರ್ ಅವರು ಭಾರತೀಯ ಮೂಲದ ರಾಜಕೀಯ ಮುಖಂಡ ಡಾ. ನೀರಜ್ ಪಾಟೀಲ್ ಮತ್ತು ಅವರ ಪತ್ನಿ ಡಾ. ಅನಘಾ ಪಾಟೀಲ್ ದಂಪತಿಯನ್ನು 10
Patil


ಲಂಡನ್, 15 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಬ್ರಿಟಿಷ್ ಹಿಂದೂ ಸಮುದಾಯದೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸುವ ಉದ್ದೇಶದಿಂದ ಯುನೈಟೆಡ್ ಕಿಂಗ್‌ಡಮ್‌ನ ಪ್ರಧಾನ ಮಂತ್ರಿ ಕೀರ್ ಸ್ಟಾರ್ಮರ್ ಅವರು ಭಾರತೀಯ ಮೂಲದ ರಾಜಕೀಯ ಮುಖಂಡ ಡಾ. ನೀರಜ್ ಪಾಟೀಲ್ ಮತ್ತು ಅವರ ಪತ್ನಿ ಡಾ. ಅನಘಾ ಪಾಟೀಲ್ ದಂಪತಿಯನ್ನು 10 ಡೌನಿಂಗ್ ಸ್ಟ್ರೀಟ್‌ಗೆ ಆಹ್ವಾನಿಸಿದ್ದಾರೆ.

ಕಾರ್ಯಕ್ರಮಕ್ಕೆ ಆಹ್ವಾನ ನೀಡಿರುವುದಕ್ಕೆ ಡಾ. ನೀರಜ್ ಪಾಟೀಲ್ ಅವರು, ಪ್ರಧಾನ ಮಂತ್ರಿಯವರ ಆತ್ಮೀಯ ಆತಿಥ್ಯಕ್ಕಾಗಿ ಹಾಗೂ ಎಲ್ಲರನ್ನೂ ಒಳಗೊಂಡ ಸಾಮರಸ್ಯದ ಯುನೈಟೆಡ್ ಕಿಂಗ್‌ಡಮ್ ನಿರ್ಮಾಣದ ದೃಷ್ಟಿಗಾಗಿ ಅವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

ಡಾ. ಪಾಟೀಲ್ ಅವರು ಬ್ರಿಟಿಷ್ ರಾಜಕೀಯ ವಲಯದಲ್ಲಿ ಪ್ರಮುಖ ಭಾರತೀಯ ಮೂಲದ ನಾಯಕರೆಂದೇ ಗುರುತಿಸಲ್ಪಟ್ಟಿದ್ದು, ಹಿಂದಿನ ಅವಧಿಯಲ್ಲಿ ಲಂಡನ್‌ನ ಲ್ಯಾಂಬೆತ್ ಬೊರೋ ಕೌನ್ಸಿಲ್‌ನ ಮೇಯರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande