ನವದೆಹಲಿ, 12 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : 1984ರಲ್ಲಿ ನಡೆದ ಆಪರೇಷನ್ ಬ್ಲೂ ಸ್ಟಾರ್ ಸಂಪೂರ್ಣವಾಗಿ ತಪ್ಪಿಸಬಹುದಾಗಿತ್ತು ಎಂದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ವಕ್ತಾರ ಆರ್.ಪಿ. ಸಿಂಗ್ ಹೇಳಿದ್ದಾರೆ.
ಮಾಜಿ ಗೃಹ ಸಚಿವ ಪಿ. ಚಿದಂಬರಂ ಅವರ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ ಅವರು, “ಆಪರೇಷನ್ ಬ್ಲೂ ಸ್ಟಾರ್ ಅಗತ್ಯವಿಲ್ಲದ ಕ್ರಮವಾಗಿತ್ತು,” ಎಂದರು.
ಭಾನುವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿರುವ ಆರ್.ಪಿ. ಸಿಂಗ್ , “ಸ್ವರ್ಣ ದೇವಾಲಯಕ್ಕೆ ವಿದ್ಯುತ್ ಮತ್ತು ನೀರು ಸರಬರಾಜು ನಿಲ್ಲಿಸಿ ಉಗ್ರರನ್ನು ಶರಣಾಗುವಂತೆ ಒತ್ತಾಯಿಸುವಂತಹ ಆಪರೇಷನ್ ಬ್ಲಾಕ್ ಥಂಡರ್ ಮಾದರಿಯ ತಂತ್ರ ಬಳಸಿದ್ದರೆ, ಶ್ರೀ ಹರ್ಮಂದಿರ್ ಸಾಹಿಬ್ ಹಾಗೂ ಅಕಾಲ್ ತಖ್ತ್ ಪವಿತ್ರತೆಯನ್ನು ಅಪವಿತ್ರಗೊಳಿಸದೆ, ನಿರಪರಾಧ ಭಕ್ತರ ಜೀವ ಹಾನಿ ತಪ್ಪಿಸಬಹುದಿತ್ತು ಎಂದಿದ್ದಾರೆ.
ಇಂದಿರಾ ಗಾಂಧಿಯವರು ರಾಜಕೀಯ ಲಾಭಕ್ಕಾಗಿ ಮುಖಾಮುಖಿಯ ಮಾರ್ಗವನ್ನು ಆಯ್ಕೆ ಮಾಡಿಕೊಂಡರು ಎಂದು ಆರೋಪಿಸಿದ ಅವರು, “1984ರ ಲೋಕ ಸಭಾ ಚುನಾವಣೆಯ ಮುನ್ನ ಸಿಖ್ಖರನ್ನು ರಾಷ್ಟ್ರವಿರೋಧಿಗಳಂತೆ ಬಿಂಬಿಸುವ ಮೂಲಕ ರಾಜಕೀಯ ಲಾಭ ಪಡೆಯುವ ಪ್ರಯತ್ನ ನಡೆಸಿದರು ಎಂದು ಆರೋಪಿಸಿದ್ದಾರೆ.
ದೆಹಲಿಯಲ್ಲಿ ನಡೆದ ಸಿಖ್ಖ ವಿರೋಧಿ ಹಿಂಸಾಚಾರದಲ್ಲಿ 3,000 ಕ್ಕೂ ಹೆಚ್ಚು ಸಿಖ್ಖರು ಬಲಿಯಾದರೆ, ಪಂಜಾಬ್‌ನಾದ್ಯಂತ 30,000 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡರು. ಇದು ದೇಶದ ಸಾಮಾಜಿಕ ಬೌದ್ಧಿಕ ರಚನೆಯನ್ನು ಛಿದ್ರಗೊಳಿಸಿದ ರಾಜಕೀಯ ಪಿತೂರಿಯ ನಿಜವಾದ ದುರಂತ ಎಂದು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa