ಕ್ಯಾಲಿಫೋರ್ನಿಯಾ ಕಾಡ್ಗಿಚ್ಚಿಗೆ ಐವರ ಬಲಿ
ಕ್ಯಾಲಿಫೋರ್ನಿಯಾ, 09 ಜನವರಿ (ಹಿ.ಸ.) : ಆ್ಯಂಕರ್ : ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಲಾಸ್ ಏಂಜಲೀಸ್ ಬಳಿ ಕಾಡ್ಗಿಚ್ಚು ದುರಂತದ ಸ್ವರೂಪ ಪಡೆದುಕೊಂಡಿದೆ. ಇದುವರೆಗೂ ಬೆಂಕಿಗೆ 5 ಜನರು ಸಾವನ್ನಪ್ಪಿದ್ದಾರೆ ಮತ್ತು ಹೆಚ್ಚಿನ ಸಂಖ್ಯೆಯ ಜನರು ಗಾಯಗೊಂಡಿದ್ದಾರೆ. ಸುಮಾರು ಮೂವತ್ತು ಸಾವಿರ ಜನರು ತಮ್ಮ ಮ
Fire


ಕ್ಯಾಲಿಫೋರ್ನಿಯಾ, 09 ಜನವರಿ (ಹಿ.ಸ.) :

ಆ್ಯಂಕರ್ : ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಲಾಸ್ ಏಂಜಲೀಸ್ ಬಳಿ ಕಾಡ್ಗಿಚ್ಚು ದುರಂತದ ಸ್ವರೂಪ ಪಡೆದುಕೊಂಡಿದೆ. ಇದುವರೆಗೂ ಬೆಂಕಿಗೆ 5 ಜನರು ಸಾವನ್ನಪ್ಪಿದ್ದಾರೆ ಮತ್ತು ಹೆಚ್ಚಿನ ಸಂಖ್ಯೆಯ ಜನರು ಗಾಯಗೊಂಡಿದ್ದಾರೆ.

ಸುಮಾರು ಮೂವತ್ತು ಸಾವಿರ ಜನರು ತಮ್ಮ ಮನೆಗಳನ್ನು ತೊರೆದಿದ್ದು ಅಪಾರ ಸಂಖ್ಯೆಯ ಕಟ್ಟಡಗಳು ಬೆಂಕಿಗೆ ಆಹುತಿಯಾಗಿವೆ.

ಆರಂಭದಲ್ಲಿ ಈ ಬೆಂಕಿ ಪೆಸಿಫಿಕ್ ಪಾಲಿಸೇಡ್ಸ್, ಈಟನ್ ಮತ್ತು ಹರ್ಸ್ಟ್ ಕಾಡುಗಳಲ್ಲಿ ಪ್ರಾರಂಭವಾಯಿತು, ಆದರೆ ಬೆಂಕಿ ನಂದಿಸುವ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಇದು ಇತರ ಪ್ರದೇಶಗಳಿಗೆ ಹರಡಿದ್ದು, ದಕ್ಷಿಣ ಕ್ಯಾಲಿಫೋರ್ನಿಯಾದ ಒಣ ಕಾಡುಗಳಲ್ಲಿ ಬಲವಾದ ಗಾಳಿಯೊಂದಿಗೆ ಈ ಬೆಂಕಿ ವೇಗವಾಗಿ ಹರಡಿತು ಎಂದು ಹೇಳಲಾಗುತ್ತಿದೆ.

ಲಾಸ್ ಏಂಜಲೀಸ್‌ನ ಅರಣ್ಯದಲ್ಲಿ ಈವರೆಗೆ 5 ಜನರು ಸಾವನ್ನಪ್ಪಿದ್ದು, ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಅಲ್ಲದೇ ಸುತ್ತಮುತ್ತ ವಾಸಿಸುತ್ತಿರುವ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಎಚ್ಚರಿಕೆಯನ್ನೂ ನೀಡಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande