ಹೈದರಾಬಾದ್ , 7 ಜನವರಿ (ಹಿ.ಸ.) :
ಆ್ಯಂಕರ್ :ಸಂಧ್ಯಾ ಚಲನಚಿತ್ರ ಮಂದಿರದಲ್ಲಿ ಕಾಲ್ತುಳಿತ ದುರಂತ ಸಂಭವಿಸಿದ 30 ದಿನಗಳ ನಂತರ, ತೆಲುಗು ನಟ ಅಲ್ಲು ಅರ್ಜುನ್ ಅವರು ಇಂದು ಬೆಳಗ್ಗೆ ಸಿಕಂದರಾಬಾದ್‌ನ ಕಿಮ್ಸ್‌ನಲ್ಲಿ ಗಾಯಾಳು ಒಂಬತ್ತು ವರ್ಷದ ಶ್ರೀ ತೇಜ್ ಅವರನ್ನು ಭೇಟಿ ಮಾಡಿದರು.
ಸುಮಾರು 30 ನಿಮಿಷಗಳ ಕಾಲ ಆಸ್ಪತ್ರೆಯಲ್ಲಿದ್ದರು. ಸುದೀರ್ಘ ಹೋರಾಟದ ನಂತರ ಚೇತರಿಸಿಕೊಳ್ಳುತ್ತಿರುವ ಬಾಲಕನ ಸ್ಥಿತಿಯನ್ನು ನಟ ಅಲ್ಲು ಅರ್ಜುನ್ ವಿಚಾರಿಸಿದರು. ಬಾಲಕನ ಆರೋಗ್ಯ ಸ್ಥಿತಿ ಹಾಗೂ ಚಿಕಿತ್ಸೆಗೆ ಹೇಗೆ ಸ್ಪಂದಿಸುತ್ತಿದ್ದಾನೆ ಎಂದು ವೈದ್ಯರಿಂದ ಮಾಹಿತಿ ಪಡೆದರು.
ಬಳಿಕ ಅವರು ಶ್ರೀ ತೇಜ್ ಅವರ ತಂದೆಯವರೊಂದಿಗೆ ಮಾತನಾಡಿ ಕುಟುಂಬದ ಬೆಂಬಲಕ್ಕೆ ನಿಲ್ಲುವುದಾಗಿ ಭರವಸೆ ನೀಡಿದರು.
ನಟ ಅಲ್ಲು ಅರ್ಜುನ್ ಜೊತೆ ತೆಲಂಗಾಣ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಧ್ಯಕ್ಷ ದಿಲ್ ರಾಜು ಕೂಡ ಇದ್ದರು. ಪೊಲೀಸ್ ಸಿಬ್ಬಂದಿ ಅವರನ್ನು ಆಸ್ಪತ್ರೆಗೆ ಕರೆದೊಯ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ ಪಿ .ವಿ