ಪ್ಯಾರಿಸ್, 6 ಜನವರಿ (ಹಿ.ಸ.) :
ಆ್ಯಂಕರ್ : ಈ ವರ್ಷ ಚಿನ್ನದ ಮೌಲ್ಯಗಳು ಏರಿಕೆಯಾದ ನಂತರ
ಇದೀಗ ರೋಲೆಕ್ಸ್ ಕೈ ಗಡಿಯಾರಗಳ ಬೆಲೆ ಹೆಚ್ಚಾಗಿದೆ.
ಅತ್ಯಂತ ಜನಪ್ರಿಯ ಐಷಾರಾಮಿ ಬ್ರ್ಯಾಂಡ್ ಹಾಗೂ ವಿಶ್ವಕ್ಕೆ ಮೊದಲ ಕೈಗಡಿಯಾರ ಕೊಟ್ಟ ರೋಲೆಕ್ಸ್ ಸಂಸ್ಥೆಯು ಇದೀಗ ತನ್ನ ರೋಲೆಕ್ಸ್ ಎಸ್ಎ, ತನ್ನ ಕೆಲವು ಜನಪ್ರಿಯ ಮಾದರಿಗಳ ಕೈ ಗಡಿಯಾರಗಳ ಬೆಲೆಯನ್ನು ಹೆಚ್ಚಿಸಿದೆ.
ಜಿನೀವಾ ಮೂಲದ ಕಂಪನಿಯು ತನ್ನ ಸಹ-ಸಂಸ್ಥಾಪಕ ಹ್ಯಾನ್ಸ್ ವಿಲ್ಸ್‌ಡೋರ್ಫ್‌ಗಾಗಿ ಹೆಸರಿಸಲಾದ ಸ್ವಿಸ್ ಫೌಂಡೇಶನ್‌ನಿಂದ ಮಾರಾಟವಾಗುವ, ಬೆಲೆಬಾಳುವ ಲೋಹಗಳಿಂದ ಮಾಡಿದ ಕೆಲವು ಮಾದರಿಗಳ ಮೇಲೆ 8% ರಷ್ಟು ಬೆಲೆಗಳನ್ನು ಹೆಚ್ಚಿಸಿದೆ.
ಫ್ರಾನ್ಸ್ ದೇಶದಲ್ಲಿರುವ ರೋಲೆಕ್ಸ್‌ನ ವೆಬ್‌ಸೈಟ್‌ನ ಪ್ರಕಾರ, ಜನವರಿ 1 ರಿಂದ ಬೆಲೆ ಹೆಚ್ಚಿಸಿದ್ದು, 40 ಮಿಲಿಮೀಟರ್ ಕಪ್ಪು ಡಯಲ್ ಹೊಂದಿರುವ ಹಳದಿ ಚಿನ್ನದ ಡೇ-ಡೇಟ್ ಬೆಲೆಯು 44,200 ಯುರೋ (45,809 ಡಾಲರ್) ವೆಚ್ಚವಾಗಲಿದೆ. ಹಳದಿ ಚಿನ್ನದ ಜಿಎಂಟಿ-ಮಾಸ್ಟರ್ II ಬೆಲೆ ಯುರೋ € 41,300 ರಿಂದ ಯುರೋ € 44,600 ಕ್ಕೆ ಏರಿದೆ.
ರೋಲೆಕ್ಸ್ ಕೈಗಡಿಯಾರ ಸಾಮಾನ್ಯವಾಗಿ ವರ್ಷಕ್ಕೊಮ್ಮೆ ಜನವರಿ ತಿಂಗಳಲ್ಲಿ ಬೆಲೆಗಳನ್ನು ಏರಿಸುತ್ತದೆ. ಈ ಬೆಲೆ ಹೆಚ್ಚಳವು ಪ್ರೀಮಿಯಂ ಐಷಾರಾಮಿ ಉತ್ಪನ್ನಗಳ ಬೇಡಿಕೆ, ಸಾಮಗ್ರಿಗಳು ಮತ್ತು ಕಾರ್ಮಿಕರ ವೆಚ್ಚ ಮತ್ತು ಹಣದುಬ್ಬರವನ್ನು ಸೂಚಿಸುತ್ತದೆ.
---------------
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ ಪಿ .ವಿ