ಭಾಗ್ಯನಗರ, 06 ಜನವರಿ (ಹಿ.ಸ.) :
ಆ್ಯಂಕರ್ : ಭಾಗ್ಯನಗರದ ಹಿರಿಯ ವಕೀಲರು ಹಾಗೂ ಜಾಮಿಯಾ ಮಜೀದ್ ಕಮಿಟಿ ಯ ಅಧ್ಯಕ್ಷರಾದ ಇಬ್ರಾಹಿಂ ಸಾಬ್ ಬಿಸನಳ್ಳಿ ಸೇರಿದಂತೆ ಮೂವರನ್ನು ಭಾಗ್ಯನಗರ ಪಟ್ಟಣ ಪಂಚಾಯತ್ ನಾಮನಿರ್ದೇಶನ ಸದಸ್ಯರನ್ನಾಗಿ ಸರ್ಕಾರ ಆದೇಶ ಹೊರಡಿಸಿದೆ.
ಕರ್ನಾಟಕ ಪುರಸಭೆ ಕಾಯ್ದೆ-1964ರ ಪ್ರಕರಣ 352(1)(ಬಿ)ರಡಿಯಲ್ಲಿ ಮುಂದಿನ ಆದೇಶದವರೆಗೆ ಕೊಪ್ಪಳ ಜಿಲ್ಲೆಯ ಭಾಗ್ಯನಗರ ಪಟ್ಟಣ ಪಂಚಾಯತಿಗೆ ಸದಸ್ಯರನ್ನಾಗಿ ಇಬ್ರಾಹಿಂಸಾಬ ರಾಜಾಸಾಬ ಬಿಸನಳ್ಳಿ, ಹನುಮಂತಪ್ಪ ಪರಮೇಶ್ವರಪ್ಪ ಬಂಡಿ, ಶ್ರೀಮತಿ ಸವಿತಾ ಅಶೋಕ ಗೋರಂಟ್ಲಿ ಯವರನ್ನು ನಾಮ ನಿರ್ದೇಶನ
ಮಾಡಿ ನಗರಾಭಿವೃದ್ಧಿ ಇಲಾಖೆಯ
ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಭಾಗ್ಯನಗರ ಪಟ್ಟಣ ಪಂಚಾಯತಗೆ ನಾಮ ನಿರ್ದೇಶನ ಸದಸ್ಯರನ್ನಾಗಿ ನೇಮಕ ಮಾಡಿದ್ದಕ್ಕಾಗಿ ಶಾಸಕರಾದ ರಾಘವೇಂದ್ರ ಹಿಟ್ನಾಳ್ ಸಂಸದರಾದ ರಾಜಶೇಖರ ಹಿಟ್ನಾಳ್ ಹಾಗೂ ಕಾಂಗ್ರೆಸ್ ಮುಖಂಡರಿಗೆ ಇಬ್ರಾಹಿಂ ಸಾಬ್ ಬಿಸನಳ್ಳಿ ಧನ್ಯವಾದ ಅರ್ಪಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ