ವೈಚಾರಿಕ ಅರಿವನ್ನು ಬೆಳೆಸುವ ಕೊಪ್ಪಳ ಜಾತ್ರಾ ಮಹೋತ್ಸವ
ಕೊಪ್ಪಳ, 15 ಜನವರಿ (ಹಿ.ಸ.) : ಆ್ಯಂಕರ್ : ಜೀವನದ ಪ್ರತಿ ಘಳಿಗೆಯೂ ಅಮೂಲ್ಯವೇ. ಎದುರಾಗುವ ಪ್ರತಿಘಟನೆಯೂ ಒಂದು ಅನುಭವವೇ. ಒಂದೊಂದು ಸವಾಲೂ ಒಂದೊಂದು ಪಾಠವೇ. ಹಾಗಾಗಿ ಅವುಗಳನ್ನು ಪ್ರೀತಿಯಿಂದ ಸ್ವೀಕರಿಸುವ ಮನೋಭಾವ ರೂಢಿಸಿಕೊಳ್ಳುವುದು ಉತ್ತಮ. ಹಾಗೆ ಮಾಡಿದಾಗಲೇ ಬದುಕು ನಿತ್ಯೋತ್ಸವ, ಇಲ್ಲವಾದರೆ ಬ
ದೇವಿಗೆ ಉಡಿ ತುಂಬುವ ಕಾರ್ಯಕ್ರಮ


ಅದ್ದೂರಿಯಾಗಿ ನೆರವೇರಿದ ಶ್ರೀ ಚೌಡೇಶ್ವರಿ ದೇವಿ ರಥೋತ್ಸವ


ಅದ್ದೂರಿಯಾಗಿ ನೆರವೇರಿದ ಶ್ರೀ ಚೌಡೇಶ್ವರಿ ದೇವಿ ರಥೋತ್ಸವ


ಕೊಪ್ಪಳ ಗವಿಮಠದ ಜಾತ್ರೆ ; ಭಕ್ತಾಧಿಗಳಿಗೆ ವಸತಿ ವ್ಯವಸ್ಥೆಯ ಮಾಹಿತಿ ವಸತಿ ವ್ಯವಸ್ಥೆ ದಿನಾಂಕ: 15-01-2025 ರಿಂದ17-01-2025 ರ ವರೆಗೆ


ಕೊಪ್ಪಳ ಗವಿಮಠದ ಜಾತ್ರೆ ; ಭಕ್ತಾಧಿಗಳಿಗೆ ವಸತಿ ವ್ಯವಸ್ಥೆಯ ಮಾಹಿತಿ ವಸತಿ ವ್ಯವಸ್ಥೆ ದಿನಾಂಕ: 15-01-2025 ರಿಂದ17-01-2025 ರ ವರೆಗೆ


ಕೊಪ್ಪಳ ಗವಿಮಠದ ಜಾತ್ರೆ ; ಭಕ್ತಾಧಿಗಳಿಗೆ ವಸತಿ ವ್ಯವಸ್ಥೆಯ ಮಾಹಿತಿ ವಸತಿ ವ್ಯವಸ್ಥೆ ದಿನಾಂಕ: 15-01-2025 ರಿಂದ17-01-2025 ರ ವರೆಗೆ


ಕೊಪ್ಪಳ, 15 ಜನವರಿ (ಹಿ.ಸ.) :

ಆ್ಯಂಕರ್ : ಜೀವನದ ಪ್ರತಿ ಘಳಿಗೆಯೂ ಅಮೂಲ್ಯವೇ. ಎದುರಾಗುವ ಪ್ರತಿಘಟನೆಯೂ ಒಂದು ಅನುಭವವೇ. ಒಂದೊಂದು ಸವಾಲೂ ಒಂದೊಂದು ಪಾಠವೇ. ಹಾಗಾಗಿ ಅವುಗಳನ್ನು ಪ್ರೀತಿಯಿಂದ ಸ್ವೀಕರಿಸುವ ಮನೋಭಾವ ರೂಢಿಸಿಕೊಳ್ಳುವುದು ಉತ್ತಮ. ಹಾಗೆ ಮಾಡಿದಾಗಲೇ ಬದುಕು ನಿತ್ಯೋತ್ಸವ, ಇಲ್ಲವಾದರೆ ಬರೀ ಸಂತೆ.

ಈ ನುಡಿ ಕೇಳಿದಾಕ್ಷಣ ನಮ್ಮಕಣ್ಣ ಮುಂದೆ ಬರುವದು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು. ಹಳೇ ಬೇರು ಹೊಸ ಚಿಗುರುಕೂಡಿರಲು ಮರ ಸೊಬಗುಎನ್ನುವ ಹಾಗೆ ಶ್ರೀ ಮ.ನಿ.ಪ್ರ.ಸ್ವರೂಪಿ ಶಿವಶಾಂತವೀರ ಗುರುಗಳ ಆಶೀರ್ವಾದದಿಂದ ಅವರ ಪರಮ ಶಿಷ್ಯರಾದ ಪೂಜ್ಯ ಅಭಿನವ ಗವಿಸಿದ್ದೇಶ್ವರರು ತಾತ್ವಿಕ ವಿಚಾರಗಳನ್ನು ಸನಾತನ ಸಂಸ್ಕøತಿಯ ನೆಲೆಗಟ್ಟಿನಲ್ಲಿ ಕಲಿತು ವೇದಾಧ್ಯಯನ, ತತ್ವಜ್ಞಾನ ಮತ್ತು ಆಧುನಿಕ ವಿದ್ಯೆಗಳ ಸಂಗಮವಾಗಿ ಇಂದು ನಮ್ಮೆಲ್ಲರ ಹೆಮ್ಮೆಯ ಗುರುಗಳಾಗಿದ್ದಾರೆ.

ಕನ್ನಡ ನಾಡಿನ ಸಾಂಸ್ಕ್ರತಿಕಚರಿತ್ರೆಯಲ್ಲಿ ಕೊಪ್ಪಳ ಹಾಗೂ ಕೊಪ್ಪಳ ನಾಡಿಗೆ ಮಹತ್ವದ ಸ್ಥಾನವಿದೆ. ಕೊಪ್ಪಳದ ಗವಿಮಠಕ್ಕೆ ಸಹಸ್ರಾರು ವರ್ಷಗಳ ಇತಿಹಾಸವಿದೆ. ಅನೇಕ ಐತಿಹ್ಯಗಳನ್ನು ತನ್ನ ಒಡಲಾಳದಲ್ಲಿ ಸಮಸ್ತ ಜೀವಿಗಳಿಗೆ ಹರಸುತ್ತ ಸರ್ವ ಧರ್ಮ ಸಮನ್ವಯದ ಸಂಕೇತ ಮತ್ತು ಪ್ರತೀಕವಾಗಿ ನಗರದ ಪೂರ್ವ ಬೆಟ್ಟದಲ್ಲಿ ಅಚಲವಾಗಿ ನೆಲೆ ನಿಂತಿರುವದೇ ಸಂಸ್ಥಾನ ಗವಿಮಠ. ಈ ನಾಡಿನ ಬದುಕಿಗೆ ಮಾರ್ಗದರ್ಶನ ನೀಡುತ್ತ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ ಹಾಗೂ ಶ್ರಮಿಸುತ್ತಲಿರುವ ಶ್ರೀ ಗವಿಮಠದ ಎಲ್ಲ ಗುರುಗಳು ಅಕ್ಷರಶಹ ಪರಮ,ಪೂಜ್ಯರು ಹಾಗೂ ಪ್ರಾತಃಸ್ಮರಣಿತರಾಗಿದ್ದಾರೆ.

ಸಮಾಜದ ಬಗೆಗೆ ಅತ್ಯಂತ ಕಳಕಳಿಯಿರುವ ಅಭಿನವ ಶ್ರೀಗಳು ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಬಂದಿರುವದು ನಮಗೆಲ್ಲರಿಗೂ ತಿಳಿದಿರುವ ವಿಷಯವೇ ಆಗಿದ್ದು ಈಗಾಗಲೇ 2000 ಬಡ ವಿದ್ಯಾರ್ಥಿಗಳಿಗೆ ಉಚಿತ ವಸತಿ ನಿಲಯದ ವ್ಯವಸ್ಥೆ ಮಾಡಿದ್ದರು. ಅದು ಈಗ 5000 ಸಂಖ್ಯೆಗೆ ಬೆಳೆದಿದ್ದು ಇದರಿಂದ ಶ್ರೀಗಳ ಸಾಮಾಜಿಕ ಮತ್ತು ಶಿಕ್ಷಣದ ಕುರಿತಾಗಿ ಇರುವಂತಹ ಕಾಳಜಿಯನ್ನು ನಾವು ಅರಿತುಕೊಳ್ಳಬಹುದಾಗಿದೆ.

ಜಾತ್ರಾ ಮಹೋತ್ಸವದಲ್ಲಿ ಹಮ್ಮಿಕೊಂಡ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳು :

ಜಾತ್ರೆಯೆಂದರೆ ಭಕ್ತರಿಗೆ ಕೇವಲ ಉತ್ಸವ ಅಥವಾ ಬಿಡುವಿನ ಸಮಯದ ಮನರಂಜನೆ ಅಲ್ಲ. ಇಲ್ಲಿ ಪ್ರತಿಯೊಬ್ಬರಿಗೆ ವೈಚಾರಿಕ ಅರಿವನ್ನು ಬೆಳೆಸುವದಗೆಕ್ಕಾಗಿ ಗವಿಮಠದ ಜಾತ್ರಾ ಮಹೋತ್ಸವದಲ್ಲಿ ಪ್ರತಿವರ್ಷಒಂದೊಂದು ಸಾಮಾಜಿಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಹಮ್ಮಿಕೊಳ್ಳಲಾಗುತ್ತಿದೆ.

2016ರ ಜಾತ್ರಾ ಮಹೋತ್ಸವದಲ್ಲಿ ಬಾಲ್ಯ ವಿವಾಹ. 2017 ರಜಾತ್ರಾ ಮಹೋತ್ಸವದಲ್ಲಿ ಜಲದೀಕ್ಷೆ, 2018 ರಜಾತ್ರಾ ಮಹೋತ್ಸವದಲ್ಲಿ ಸಶಕ್ತ ಮನ ಸಂತೃಪ್ತ ಜೀವನ ಎನ್ನುವ ಕಾರ್ಯಕ್ರಮ, 2019 ರ ಜಾತ್ರಾ ಮಹೋತ್ಸವದಲ್ಲಿ “ಕೃಪಾದೃಷ್ಠಿ”ನೇತ್ರದಾನ ಜಾಗೃತಿ ಅಭಿಯಾನ, 2020 ರ ಜಾತ್ರಾ ಮಹೋತ್ಸವದಲ್ಲಿ ಲಕ್ಷ ವೃಕ್ಷೋತ್ಸವ ಮರಗಳ ಸಂರಕ್ಷಣಾ ಅರಿವು ಕಾರ್ಯಕ್ರಮ, 2021 ರಜಾತ್ರಾ ಮಹೋತ್ಸವದಲ್ಲಿ ಸರಳ ಜಾತ್ರೆ ಸಮಾಜ ಮುಖಿ ಜಾತ್ರೆ ಎಂಬ ಧ್ಯೇಯದ ಅಡಿಯಲ್ಲಿ ಮೂರು ಸಂಕಲ್ಪಗಳನ್ನು ಮಾಡಿ ಅವುಗಳನ್ನು ಗವಿಮಠದ ಪೂಜ್ಯರು ಸಾಕಾರಗೊಳಿಸಿದ್ದಾರೆ.

ಇಂತಹ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ಪ್ರತಿ ವರ್ಷ ಒಂದೊಂದು ವಿಶಿಷ್ಟ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. 2022 ರಲ್ಲಿ 2023 ರಲ್ಲಿ 2024 ರಲ್ಲಿಈ ವರ್ಷ11-01-2025 ರಂದು ಸಕಲಚೇತನ ಜಾಥಾ ಕೈಗೊಂಡು ಶಾಲಾ ಮಕ್ಕಳು ಪಾಲ್ಗೊಂಡು ಯಶಸ್ವಿಯಾಗಿದೆ .

ಪ್ರಸ್ತುತ 18 ನೇ ಪೀಠಾಧಿಪತಿಗಳಾದ ಅಭಿನವ ಗವಿಸಿದ್ಧೇಶ್ವರ ಶಿವಯೋಗಿಗಳು ಕೊಪ್ಪಳದ ಭಾಗದಲ್ಲಿ ನಡೆದಾಡುವ ದೇವರೆಂದೆ ಹೆಸರಾದವರು. ಜಾತ್ರೆಯಅರ್ಥಕ್ಕೆ ಹೊಸ ವಾಖ್ಯಾನ ಬರೆದ ಸಾರ್ವಭೌಮರು.ಹಿಂದುಳಿದ ಕ್ಷೇತ್ರವೆಂದೆ ಹೆಸರು ಪಡೆದ ಕೊಪ್ಪಳದ ಮುನ್ನಡೆಗೆ ಮುನ್ನುಡಿ ಬರೆದ ಶ್ರಮ ಸಂಸ್ಕ್ರತಿ ಅವರದು. ಸಕಲ ಜೀವಾತ್ಮರಿಗೂ ಲೇಸನ್ನು ಬಯಸುವ ದಯಾಘನರು.ಇಂತಹ ಬಹುಮುಖ ವ್ಯಕ್ತಿತ್ವದವರುಕ್ರೀಡೆ, ಆರೋಗ್ಯ, ಕೃಷಿ, ಜಲ,ಜೀವನವನ್ನು ಕಟ್ಟಿಕೊಳ್ಳುವ ಬಗೆ ಹಾಗೂ ಧಾರ್ಮಿಕಕುರಿತಾಗಿಜನರಲ್ಲಿ ವೈಚಾರಿಕತೆಯನ್ನು ಬೆಳೆಸುವಲ್ಲಿ ಮೊದಲಿಗರಾಗಿದ್ದಾರೆ.

ಅಭಿನವ ಗವಿಸಿದ್ಧೇಶ್ವರರು 13-12-2002 ರಿಂದ ಶ್ರೀ ಮಠಕ್ಕೆ 18 ನೇ ಪೀಠಾಧಿಪತಿಗಳಾಗಿದ್ದು ಅಂದಿನಿಂದ ವರ್ಷದಿಂದ ವರ್ಷಕ್ಕೆಜಾತ್ರೆಯ ವಾಖ್ಯಾನಕ್ಕೆ ಹೊಸ ಹೊಸ ಆಯಾಮಗಳನ್ನು ನೀಡುತ್ತಾ ಬಂದಿರುವರು. ಏನೆಲ್ಲಾ ಕಾರ್ಯ ಮಾಡಿದರೂಅದು ಗವಿಸಿದ್ಧನ ಹಾಗೂ ಮೊದಲಿನ ಎಲ್ಲಾ ಶಿವಯೋಗಿಗಳ ತಪಸ್ಸಿನ ಶಕ್ತಿ ಹಾಗೂ ಆಶಿರ್ವಾದದ ಕೃಪೆ ಎಂದು ಹೇಳುವ ಮಹಾ ಮಹಿಮಾ ಸರಳ ವ್ಯಕ್ತಿತ್ವದ ಪೂಜ್ಯಅಭಿನವ ಗವಿಶ್ರೀಗಳು. ನಿರಹಂಭಾವಿಗಳಾಗಿ ಮಠದ ಸರ್ವಾಂಗಿಣಅಭಿವೃದ್ದಿಗೆ ಗಡಿಯಾರದ ಮುಳ್ಳಿನಂತೆ ದಣಿವಿಲ್ಲದೆ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುತಿದ್ದಾರೆ. ಇಂದಿನ ಯುವ ಸಮೂಹಕ್ಕೆ ಆದರ್ಶ ಮಾದರಿಯಾಗಿದ್ದಾರೆ.

ಅನ್ನ,ಅಕ್ಷರ ಮತ್ತುಆಧ್ಯಾತ್ಮಿಕದಾಸೋಹದ ಮೂಲಕ ನಾಡಿನೂದ್ದಕ್ಕೂಜಾತಿ, ಮತ, ಪಂತ ಎಂಬ ಯಾವ ಬೇದವಿಲ್ಲದೆ ಸಮಸ್ತ ಭಕ್ತಸಮಸ್ಥಲವನ್ನುಉದ್ಧರಿಸುತ್ತಾ ಶ್ರೀ ಗವಿಮಠವು ಮುನ್ನಡೆಯುತ್ತಿದೆ.ಪ್ರತಿ ವರ್ಷದಂತೆ ಈ ವರ್ಷದಜಾತ್ರೆಯಲ್ಲಿಯೂ ಹಲವಾರುಕ್ರೀಡಾ ಸ್ವರ್ಧೆಗಳನ್ನು ಮತ್ತು ಪ್ರಭಂದಹಾಗೂ ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಿದ್ದು ಜಾತ್ರೆಯಲ್ಲಿಯೂಕೂಡ ಹಲವಾರುಗ್ರಾಮೀಣಕ್ರೀಡಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.

ದಕ್ಷಿಣ ಭಾರತದ ಕುಂಭಮೇಳ ಎಂದು ಪ್ರಖ್ಯಾತಿ ಪಡೆದಿರುವ ಗವಿಮಠದಜಾತ್ರೆಯರಥೋತ್ಸವವು ಈ ವರ್ಷದ 15-01-2025 ಬುಧವಾರದಂಂದುಜರುಗಲಿದ್ದು ಬನ್ನಿ ಎಲ್ಲರೂ ಈ ಅವಿಸ್ಮರಣೀಯ ಪರಂಪರೆಗೆ ಸಾಕ್ಷಿಯಾಗೋಣ.

ಶ್ರೀಗಂಗಾಧರ ಸೊಪ್ಪಿಮಠ ಕೊಪ್ಪಳ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande