ಬೆಂಗಳೂರು, 15 ಜನವರಿ (ಹಿ.ಸ.) :
ಆ್ಯಂಕರ್ :ಪ್ರತಿ ವರ್ಷದಂತೆ ಈ ಬಾರಿಯು ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ೨೧೭ನೇ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ.ಫಲಪುಷ್ಪ ಪ್ರದರ್ಶನಕ್ಕೆ ತೋಟಗಾರಿಕೆ ಇಲಾಖೆ ಸಿದ್ದತೆ ನಡೆಸಿದೆ.
ನಾಳೆಯಿಂದ ಇದೇ ೨೭ರವರೆಗೆ ೧೨ ದಿನಗಳ ಕಾಲ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ಈ ಫಲಪುಷ್ಪ ಪ್ರದರ್ಶನವು ಹಲವು ಕಾರಣಗಳಿಂದ ವಿಶಿಷ್ಟವಾಗಿರಲಿದೆ. ಫಲಪುಷ್ಪ ಪ್ರದರ್ಶನಕ್ಕೆ 70 ತರಹದ 25 ಲಕ್ಷ ಹೂವುಗಳನ್ನು ಬಳಕೆ ಮಾಡಲಾಗುತ್ತಿದೆ. ಈ ಬಾರಿ ವಾಲ್ಮೀಕಿಗೆ ಗೌರವ ಸಲ್ಲಿಸಲು ಪ್ರದರ್ಶನ ಸಜ್ಜಾಗಿದ್ದು, ರಾಮಾಯಣದ ಮೂಲಕ ಪ್ರವಾಸಿಗರನ್ನು ಹೂವಿನ ಲೋಕಕ್ಕೆ ಕರೆದೊಯ್ಯುಲಿದೆ.
---------------
ಹಿಂದೂಸ್ತಾನ್ ಸಮಾಚಾರ್ / Dr. Vara Prasada Rao PV