ದಾವಣಗೆರೆ,15 ಜನವರಿ (ಹಿ.ಸ.) :
ಆ್ಯಂಕರ್ :ದಾವಣಗೆರೆ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ೪೮ರಲ್ಲಿ ನಿರ್ಮಾಣ ಮಾಡಿರುವ ಕೆಳ ಸೇತುವೆ ಕಾಮಗಾರಿಯನ್ನು ನವದೆಹಲಿಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ವಿಶೇಷ ಸಭೆ ನಡೆಸಿದ ಬಳಿಕ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು.
ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ಸೇತುವೆಯ ಮೂಲಕ ಹಾದು ಹೋಗಲು ಅಂಬ್ಯುಲೆನ್ಸ್ ಮತ್ತು ಇತರೆ ತುರ್ತು ವಾಹನಗಳಿಗೆ ಅಡ್ಡಿ ಉಂಟಾಗಿರುವ ಕುರಿತು ಸಂಸದರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಗಮನ ಸೆಳೆದರು.
ಅವೈಜ್ಞಾನಿಕ ಕಾಮಗಾರಿ ಕುರಿತು ಸಂಸದರು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಗಮನಕ್ಕೆ ತಂದಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Dr. Vara Prasada Rao PV