ಅಹಮದಾಬಾದ್,14 ಜನವರಿ (ಹಿ.ಸ.) :
ಆ್ಯಂಕರ್ :ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಗುಜರಾತ್‌ನ ಅಹಮದಾಬಾದ್‌ನ ಮೇಮ್ ನಗರ ಪ್ರದೇಶದಲ್ಲಿ ಪತಂಗ್ ಮಹೋತ್ಸವದಲ್ಲಿ ಪಾಲ್ಗೊಂಡು ಉತ್ತರಾಯಣ ಸಂಕ್ರಾಂತಿ ಹಬ್ಬವನ್ನು ಆಚರಣೆಯ ಭಾಗವಾಗಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೊಂದಿಗೆ ಗಾಳಿಪಟ ಹಾರಿಸಿ ಯುವಕರಿಗೆ ಉತ್ಸಾಹ ತುಂಬಿದರು.
ಗುಜರಾತ್ ರಾಜ್ಯವು ಅಂತರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಹೆಸರುವಾಸಿಯಾಗಿದೆ. ಅಹಮದಾಬಾದ್‌ನಲ್ಲಿ ಕಳೆದ 3 ದಿನಗಳಿಂದ ಉತ್ತರಾಯಣ ಪತಂಗ್ ಮಹೋತ್ಸವ ಕಾರ್ಯಕ್ರಮ ನಡೆಯುತ್ತಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಇತರ ಬಿಜೆಪಿ ಕಾರ್ಯಕರ್ತರು ಸೇರಿ ಅಹಮದಾಬಾದ್‌ನ ಮೇಮ್ ನಗರದ ಶಾಂತಿ ನಿಕೇತನ ಅಪಾರ್ಟ್‌ಮೆಂಟ್‌ನ ಮೇಲ್ಛಾವಣಿಯಿಂದ ಗಾಳಿಪಟಗಳನ್ನು ಹಾರಿಸುವ ಮೂಲಕ ಉತ್ತರಾಯಣ ಹಬ್ಬವನ್ನು ಆಚರಿಸಿದರು.
ಬಳಿಕ ಅವರು ಸಬರಮತಿ ವಿಧಾನಸಭೆಯ ಮೂರು ಸ್ಥಳಗಳಲ್ಲಿ ಕಾರ್ಮಿಕರೊಂದಿಗೆ ಗಾಳಿಪಟ ಹಾರಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು. ಈ ಕಾರ್ಯಕ್ರಮದ ನಂತರ, ಕೇಂದ್ರ ಗೃಹ ಅಮಿತ್ ಶಾ ಅವರು ಅಹಮದಾಬಾದ್‌ನ ಜಗನ್ನಾಥ ದೇವಾಲಯಕ್ಕೆ ಭೇಟಿ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Dr. Vara Prasada Rao PV