ಫ್ರಿಡ್ಜ್ ನಲ್ಲಿ ನಿಂಬೆಹಣ್ಣು ಇಡುವುದರಿಂದ ಸಿಗುವ ಪ್ರಯೋಜನ
ಹುಬ್ಬಳ್ಳಿ, 14 ಜನವರಿ (ಹಿ.ಸ.) : ಆ್ಯಂಕರ್ : ನಿಂಬೆಹಣ್ಣನ್ನು ಸೇವನೆ ಮಾಡಲು ನಾನಾ ರೀತಿಯಲ್ಲಿ ಬಳಸಿಕೊಳ್ಳುವುದು ಮಾತ್ರವಲ್ಲ, ಸ್ವಚ್ಛಗೊಳಿಸಲು ಮತ್ತು ಇತರ ಅನೇಕ ವಿಷಯಗಳಿಗೂ ಬಳಸಬಹುದು. ನಿಂಬೆಯ ಪರಿಮಳ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಸೌಂದರ್ಯದಿಂದ ಹಿಡಿದು ಆರೋಗ್ಯದವರೆಗೆ, ನಿಂಬೆ ಎಲ್ಲಾ
Lemon


ಹುಬ್ಬಳ್ಳಿ, 14 ಜನವರಿ (ಹಿ.ಸ.) :

ಆ್ಯಂಕರ್ : ನಿಂಬೆಹಣ್ಣನ್ನು ಸೇವನೆ ಮಾಡಲು ನಾನಾ ರೀತಿಯಲ್ಲಿ ಬಳಸಿಕೊಳ್ಳುವುದು ಮಾತ್ರವಲ್ಲ, ಸ್ವಚ್ಛಗೊಳಿಸಲು ಮತ್ತು ಇತರ ಅನೇಕ ವಿಷಯಗಳಿಗೂ ಬಳಸಬಹುದು. ನಿಂಬೆಯ ಪರಿಮಳ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಸೌಂದರ್ಯದಿಂದ ಹಿಡಿದು ಆರೋಗ್ಯದವರೆಗೆ, ನಿಂಬೆ ಎಲ್ಲಾ ಕ್ಷೇತ್ರಗಳಲ್ಲಿಯೂ ಬಹಳ ಉಪಯುಕ್ತವಾಗಿದೆ.

ಇದೆಲ್ಲದರ ಜೊತೆಗೆ ನಿಂಬೆಹಣ್ಣನ್ನು ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟರೆ ಅನೇಕ ರೀತಿಯ ಪ್ರಯೋಜನಗಳಿವೆ ಎಂಬುದು ಹಲವರಿಗೆ ತಿಳಿದಿಲ್ಲ. ಈ ಕುರಿತು ಮಾಹಿತಿ ಇಲ್ಲಿದೆ..

ಸಾಮಾನ್ಯವಾಗಿ ನಾವು ಎಲ್ಲಾ ಆಹಾರ ಪದಾರ್ಥಗಳನ್ನು ಫ್ರಿಡ್ಜ್ ನಲ್ಲಿ ಸಂಗ್ರಹಿಸಿಡುತ್ತೇವೆ. ಇದರ ಜೊತೆ ಜೊತೆಗೆ ಶುಚಿತ್ವದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹಳ ಮುಖ್ಯ. ಇದಕ್ಕೆ ನಿಂಬೆ ಬಹಳ ಉಪಯುಕ್ತವಾಗಿದೆ. ಏಕೆಂದರೆ ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ಇದು ಫ್ರಿಡ್ಜ್ ನಿಂದ ಬ್ಯಾಕ್ಟೀರಿಯಾವನ್ನು ನಿವಾರಣೆ ಮಾಡುತ್ತದೆ, ಸೋಂಕುಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ಫ್ರಿಡ್ಜ್ ನಲ್ಲಿರುವ ಗಾಳಿಯನ್ನು ನೈಸರ್ಗಿಕವಾಗಿ ಸ್ವಚ್ಛವಾಗಿಡಲು ಇದು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

ಸಾಮಾನ್ಯವಾಗಿ ಫ್ರಿಡ್ಜ್ ಶುಚಿತ್ವದ ವಿಷಯದಲ್ಲಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೂ, ಕೆಲವೊಮ್ಮೆ ದುರ್ವಾಸನೆಯ ಸಮಸ್ಯೆ ಕಾಡುತ್ತದೆ. ಹೆಚ್ಚಿನ ಸಮಯದಲ್ಲಿ ಈ ವಾಸನೆ ರೆಫ್ರಿಜರೇಟರ್‌ ನಲ್ಲಿ ಇರಿಸಲಾದ ಆಹಾರ ಪದಾರ್ಥಗಳಲ್ಲಿಯೂ ಕಂಡುಬರುತ್ತದೆ. ಇಂತಹ ಸಂದರ್ಭಗಳಲ್ಲಿ ಈ ವಾಸನೆಯ ಸಮಸ್ಯೆಯನ್ನು ನಿವಾರಿಸಲು ಸುಲಭವಾದ ಮಾರ್ಗವೆಂದರೆ ನಿಂಬೆಯನ್ನು ಎರಡು ತುಂಡುಗಳಾಗಿ ಕತ್ತರಿಸಿ ರೆಫ್ರಿಜರೇಟರ್‌ ನಲ್ಲಿ ಇಡುವುದು. ಈ ರೀತಿ ಮಾಡುವುದರಿಂದ ನಿಂಬೆಯಲ್ಲಿರುವ ಸಿಟ್ರಿಕ್ ಆಮ್ಲವು ಫ್ರಿಡ್ಜ್ ನಲ್ಲಿರುವ ಕೆಟ್ಟ ವಾಸನೆಯನ್ನು ತೆಗೆದು ಹಾಕುತ್ತದೆ. ಇದು ಗಾಳಿಯನ್ನು ನೈಸರ್ಗಿಕವಾಗಿ ತಾಜಾ ಮತ್ತು ಪರಿಮಳಯುಕ್ತವಾಗಿರಿಸುತ್ತದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande