ನವದೆಹಲಿ, 13ಜನವರಿ (ಹಿ.ಸ.) :
ಆ್ಯಂಕರ್ :ಪ್ರಧಾನಿ ನರೇಂದ್ರ ಮೋದಿ ಇದೇ ೧೫ ರಂದು ಮಹಾರಾಷ್ಟ್ರ ಪ್ರವಾಸ ಕೈಗೊಳ್ಳಲಿದ್ದು, ಮುಂಬೈನ ನೌಕಾನೆಲೆಯಲ್ಲಿ ಕಾರ್ಯಾರಾಂಭ ಮಾಡಲಿರುವ ಮೂರು ಮುಂಚೂಣಿ ಯುದ್ಧ ನೌಕೆಗಳಾದ ಐಎನ್‌ಎಸ್ ಸೂರತ್, ಐಎನ್‌ಎಸ್ ನೀಲಗಿರಿ ಮತ್ತು ಐಎನ್‌ಎಸ್ ವಾಘ್‌ಶೀರ್‌ಗಳನ್ನು ಅಂದು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ಐಎನ್‌ಎಸ್ ಸೂರತ್, ಐಎನ್‌ಎಸ್ ನೀಲಗಿರಿ ಮತ್ತು ಐಎನ್‌ಎಸ್ ವಾಘ್‌ಶೀರ್‌ಯುದ್ಧ ನೌಕೆಗಳ ಕಾರ್ಯಾರಂಭ ರಕ್ಷಣಾ ಉತ್ಪಾದನೆ ಮತ್ತು ಕಡಲ ಭದ್ರತೆಯಲ್ಲಿ ಜಾಗತಿಕ ನಾಯಕನಾಗುವ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ಪಿ೧೫ಬಿ ಮಾರ್ಗದರ್ಶಿ ಕ್ಷಿಪಣಿ ವಿಧ್ವಂಸಕ ಯೋಜನೆಯ ನಾಲ್ಕನೇ ಮತ್ತು ಅಂತಿಮ ಹಡಗು ಐಎನ್‌ಎಸ್ ಸೂರತ್, ವಿಶ್ವದ ಅತಿದೊಡ್ಡ ಮತ್ತು ಅತ್ಯಾಧುನಿಕ
ನೌಕೆಗಳಲ್ಲಿ ಸ್ಥಾನ ಪಡೆದಿದೆ.
ಪಿ೧೭ಎ ಸ್ಟೀಲ್ತ್ ಫ್ರಿಗೇಟ್ ಯೋಜನೆಯ ಮೊದಲ ಹಡಗು ಐಎನ್‌ಎಸ್ ನೀಲಗಿರಿಯನ್ನು ಭಾರತೀಯ ನೌಕಾಪಡೆಯ ಯುದ್ಧನೌಕೆ ವಿನ್ಯಾಸ ಸಂಸ್ಥೆ ವಿನ್ಯಾಸಗೊಳಿಸಿದ್ದು, ಸುಧಾರಿತ ವೈಶಿಷ್ಟ್ಯಗಳನ್ನು ಒಳಗೊಂಡಿದೆ, ಐಎನ್‌ಎಸ್ ವಾಘಶೀರ್ ಜಲಾಂತರ್ಗಾಮಿ ನಿರ್ಮಾಣದಲ್ಲಿ ಭಾರತದ ಬೆಳೆಯುತ್ತಿರುವ ಪರಿಣತಿಯನ್ನು ಪ್ರತಿನಿಧಿಸುತ್ತದೆ. ಈ ಭೇಟಿ ವೇಳೆ ಪ್ರಧಾನಿ ಮೋದಿ ಮುಂಬೈನ ಖಾರ್ಘರ್‌ನಲ್ಲಿ ಇಸ್ಕಾನ್ ದೇವಾಲಯವನ್ನು ಉದ್ಘಾಟಿಸಲಿದ್ದಾರೆ. ಒಂಬತ್ತು ಎಕರೆ ಪ್ರದೇಶದಲ್ಲಿ ಹರಡಿರುವ ಈ ಯೋಜನೆಯು ಹಲವು ದೇವತೆಗಳ ಮಂದಿರ, ವೇದ ಶಿಕ್ಷಣ ಕೇಂದ್ರ, ಪ್ರಸ್ತಾವಿತ ವಸ್ತುಸಂಗ್ರಹಾಲಯಗಳು ಮತ್ತು ಸಭಾಂಗಣವನ್ನು ಒಳಗೊಂಡಿದೆ.
---------------
ಹಿಂದೂಸ್ತಾನ್ ಸಮಾಚಾರ್ / Dr. Vara Prasada Rao PV