ಸೋನಮಾರ್ಗ್ ಸುರಂಗ ಮಾರ್ಗ ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಿ
ಕಾಶ್ಮೀರದಲ್ಲಿಂದು ನೂತನ ಸೋನಮಾರ್ಗ್ ಸುರಂಗ ಮಾರ್ಗವನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಿ ನರೇಂದ್ರ ಮೋದಿ
ಸೋನಮಾರ್ಗ್ ಸುರಂಗ ಮಾರ್ಗವನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಿ


ಗಂಡೇರ್ಬಲ್, 13ಜನವರಿ (ಹಿ.ಸ.) :

ಆ್ಯಂಕರ್ :ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದು ಮಧ್ಯ ಕಾಶ್ಮೀರದ ಗಂಡೇರ್ಬಲ್ ಜಿಲ್ಲೆಗೆ ಭೇಟಿ ನೀಡಿ, ಸೋನಮಾರ್ಗ್ ಸುರಂಗ ಯೋಜನೆಯನ್ನು ಲೋಕಾರ್ಪಣೆಗೊಳಿಸಿದರು.

ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಸುರಂಗ ಮಾರ್ಗ ನಿರ್ಮಿಸಿದ ಕಾರ್ಮಿಕರನ್ನು ಭೇಟಿಯಾದರು.

ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಡಾ. ಜಿತೇಂದ್ರ ಸಿಂಗ್, ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್, ಮನೋಜ್ ಸಿನ್ಹಾ, ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ, ಜಮ್ಮು-ಕಾಶ್ಮೀರ ಸಚಿವರು, ಸಂಸದರು ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಇದೇ ವೇಳೆ ಪ್ರಧಾನಿ ಸುರಂಗ ಮಾರ್ಗದ ಪರಿಶೀಲನೆ ನಡೆಸಿದರು.

ಸುಮಾರು ೧೨ ಕಿಲೋಮೀಟರ್ ಉದ್ದದ ಸೋನಮಾರ್ಗ್ ಸುರಂಗ ಮಾರ್ಗವನ್ನು ೨ ಸಾವಿರದ ೭೦೦ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಈ ಸುರಂಗ ಯೋಜನೆ, ಶ್ರೀನಗರ - ಸೋನಮಾರ್ಗ್ ನಡುವೆ ಲೇಹ್ ಮೂಲಕ ಸಂಪರ್ಕ ಕಲ್ಪಿಸಲಿದೆ. ಈ ಸರ್ವಋತು ಮಾರ್ಗ, ಲಡಾಖ್ ವಲಯಕ್ಕೆ ಭೂಕುಸಿತ ಮತ್ತು ಹಿಮ ಪಾತಕ್ಕೆ ಪರ್ಯಾಯವಾಗಿ ಸುರಕ್ಷಿತ ಸಂಚಾರ ವ್ಯವಸ್ಥೆ ಕಲ್ಪಿಸಲಿದೆ. ಪ್ರವಾಸಿಗರಿಗೆ ಹಾಗೂ ಈ ಭಾಗದ ಆರ್ಥಿಕ ಚಟುವಟಿಕೆಗಳಿಗೆ ಇದರಿಂದ ಅತ್ಯಧಿಕ ಪ್ರಯೋಜನವಾಗಲಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾಶ್ಮೀರ ಭೇಟಿ ಹಿನ್ನೆಲೆಯಲ್ಲಿ ಮಧ್ಯಕಾಶ್ಮೀರದ ಶ್ರೀನಗರ ಮತ್ತು ಗಂದೇರ್‌ಬಾಲ್ ಜಿಲ್ಲೆಗಳಲ್ಲಿ ವ್ಯಾಪಕ ಬಂದೋಬಸ್ತ್ ಮಾಡಲಾಗಿತ್ತು.

---------------

ಹಿಂದೂಸ್ತಾನ್ ಸಮಾಚಾರ್ / Dr. Vara Prasada Rao PV


 rajesh pande