ಬೆಂಗಳೂರು, 09 ಸೆಪ್ಟೆಂಬರ್(ಹಿ.ಸ.) :
ಆ್ಯಂಕರ್ : ಮೋಹಕ ತಾರೆ ರಮ್ಯಾ ಮದುವೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಹಲವಾರು ಬಾರಿ ರಮ್ಯಾ ಮದುವೆ ವಿಚಾರ ಭಾರಿ ಚರ್ಚೆ ಕೂಡ ಆಗಿದೆ. ಸ್ಯಾಂಡಲ್‌ವುಡ್ ಮೋಹಕ ತಾರೆ ರಮ್ಯಾ ಯಾವುದೇ ಕಾರ್ಯಕ್ರಮಕ್ಕೆ ಹೋಗಲಿ ಅಲ್ಲಿ ಮದುವೆ ವಿಷಯ ಪ್ರಸ್ತಾಪ ಆಗಿಯೇ ಆಗತ್ತೆ. ಈಗ ರಮ್ಯಾ ಮದುವೆ ವಿಷಯ ಬೆಳಕಿಗೆ ಬಂದಿದೆ.
ರಾಜಸ್ಥಾನ ಮೂಲದ ಜವಳಿ ಉದ್ಯಮಿ ಜೊತೆ ರಮ್ಯಾ ನಿಶ್ಚಿತಾರ್ಥ ಆಗಿದೆ ಅನ್ನೋ ವಿಚಾರ ಗಾಂದಿನಗರದ ಗಲ್ಲಿಗಲ್ಲಿಗಳಲ್ಲಿ ಇವತ್ತು ಕೇಳಿ ಬಂತು. ಆಪ್ತರು ಹೇಳುವಂತೆ ಅಕ್ಟೋಬರ್ ನಲ್ಲಿ ನಿಶ್ಚಿತಾರ್ಥ ಆಗಲಿದ್ದಾರಂತೆ. ನವೆಂಬರ್‌ನಲ್ಲಿ ಬೆಂಗಳೂರಿನ ಅರಮನೆಯಲ್ಲಿ ಮದುವೆ ನಡೆಯಲಿದೆ. ರಾಜಸ್ಥಾನದಲ್ಲಿ ಆರತಕ್ಷತೆ ನಡೆಲಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. ಇದನ್ನು ಅವರ ಆಪ್ತರು ಕೂಡ ಖಚಿತ ಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಇವರ ನಿಶ್ಚಿತಾರ್ಥ ನಡೆಯಲಿದೆ. ಹಾಗೂ ರಮ್ಯಾರ ಹುಟ್ಟು ಹಬ್ಬದ ದಿನದಂದೇ (ನ.29) ಈ ಜೋಡಿ ಹೊಸ ಬದುಕಿಗೆ ಕಾಲಿಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್