ಗಣೇಶ ಚತುರ್ಥಿ ಆಚರಿಸಿದ ಬಾಂಗ್ಲಾದೇಶ್ ಕ್ರಿಕೆಟಿಗ
ಢಾಕಾ, 08 ಸೆಪ್ಟೆಂಬರ್(ಹಿ.ಸ.) : ಆ್ಯಂಕರ್ : ಶನಿವಾರ ದೇಶಾದ್ಯಂತ ಗಣೇಶ ಚತುರ್ಥಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಅತ್ತ ವಿದೇಶದಲ್ಲಿರುವ ಹಿಂದೂಗಳು ಕೂಡ ಸಂಭ್ರಮ ಸಡಗರದಿಂದಲೇ ಚೌತಿ ಹಬ್ಬವನ್ನು ಆಚರಿಸಿದ್ದರು. ಇನ್ನು ಬಾಂಗ್ಲಾದೇಶ್ ಕ್ರಿಕೆಟಿಗ ಲಿಟ್ಟನ್ ದಾಸ್ ಕೂಡ ತಮ್ಮ ಮನೆಯಲ್ಲಿಯೇ
ಢಾಕಾ


ಢಾಕಾ, 08 ಸೆಪ್ಟೆಂಬರ್(ಹಿ.ಸ.) :

ಆ್ಯಂಕರ್ : ಶನಿವಾರ ದೇಶಾದ್ಯಂತ ಗಣೇಶ ಚತುರ್ಥಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಅತ್ತ ವಿದೇಶದಲ್ಲಿರುವ ಹಿಂದೂಗಳು ಕೂಡ ಸಂಭ್ರಮ ಸಡಗರದಿಂದಲೇ ಚೌತಿ ಹಬ್ಬವನ್ನು ಆಚರಿಸಿದ್ದರು.

ಇನ್ನು ಬಾಂಗ್ಲಾದೇಶ್ ಕ್ರಿಕೆಟಿಗ ಲಿಟ್ಟನ್ ದಾಸ್ ಕೂಡ ತಮ್ಮ ಮನೆಯಲ್ಲಿಯೇ ವಿಶೇಷ ಪೂಜೆ ಸಲ್ಲಿಸುವ ಮೂಲಕ ಗಣೇಶ ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಬಗ್ಗೆ ಕ್ರಿಕೆಟಿಗ ಲಿಟ್ಟನ್ ದಾಸ್ ತಮ್ಮ ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಬಾಂಗ್ಲಾ ಕ್ರಿಕೆಟಿಗನ ಗಣೇಶ ಹಬ್ಬದ ಚಿತ್ರಗಳು ವೈರಲ್ ಆಗಿವೆ.

ಹಿಂದೂ ಧರ್ಮೀಯನಾಗಿರುವ ಲಿಟ್ಟನ್ ದಾಸ್ ಮನೆಯಲ್ಲಿಯೇ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಿಕೊಂಡರು. ಕುಟುಂಬದವರೊಂದಿಗೆ ವಿಘ್ನನಿವಾರಕನಿಗೆ ವಿಶೇಷ ಪೂಜೆ ಸಲ್ಲಿಸಿದ ಚಿತ್ರಗಳನ್ನು ತಮ್ಮ ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಂಡಿದ್ದಾರೆ.

ಸದ್ಯ ತವರಿನಲ್ಲಿರುವ ಲಿಟ್ಟನ್ ದಾಸ್ ಶೀಘ್ರದಲ್ಲೇ ಭಾರತಕ್ಕೆ ಬರಲಿದ್ದಾರೆ. ಸೆಪ್ಪೆಂಬರ್ 19 ರಿಂದ ಭಾರತ ಮತ್ತು ಬಾಂಗ್ಲಾದೇಶ್ ನಡುವಣ ಟೆಸ್ಟ್ ಸರಣಿ ಶುರುವಾಗಲಿದ್ದು, ಈ ಸರಣಿಯಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಲಿಟ್ಟನ್ ದಾಸ್ ಬಾಂಗ್ಲಾ ಪರ ಕಣಕ್ಕಿಳಿಯಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande