ರಸ್ತೆ ಅಪಘಾತ: ಸಹೋದರರಿಬ್ಬರ ಸಾವು
ಇಳಕಲ್ಲ, 07 ಸೆಪ್ಟೆಂಬರ್(ಹಿ.ಸ.) : ಆ್ಯಂಕರ್ : ಬೆಳಗಾವಿ ರಾಯಚೂರು ಹೆದ್ದಾರಿಯ ಕಮತಗಿ ಕ್ರಾಸ್ ಬಳಿ ಶುಕ್ರವಾರ ರಾತ್ರಿ ಸಂಭವಿಸಿರುವ ರಸ್ತೆ ಅಪಘಾತದಲ್ಲಿ ಇಬ್ಬರು ದ್ವಿಚಕ್ರ ವಾಹನ ಸವಾರರು ಮೃತಪಟ್ಟಿದ್ದಾರೆ. ಇಳಕಲ್ ನಗರದ ಓಂಕಾರ ಟಾಕೀಜ್ ಹತ್ತಿರ ನಿವಾಸಿಗಳಾದ ಅಮರೇಶ ಬೆನಕನಾಳಮಠ(೨೪), ಶರಣಯ್ಯ
್ುು


ಇಳಕಲ್ಲ, 07 ಸೆಪ್ಟೆಂಬರ್(ಹಿ.ಸ.) :

ಆ್ಯಂಕರ್ : ಬೆಳಗಾವಿ ರಾಯಚೂರು ಹೆದ್ದಾರಿಯ ಕಮತಗಿ ಕ್ರಾಸ್ ಬಳಿ ಶುಕ್ರವಾರ ರಾತ್ರಿ ಸಂಭವಿಸಿರುವ ರಸ್ತೆ ಅಪಘಾತದಲ್ಲಿ ಇಬ್ಬರು ದ್ವಿಚಕ್ರ ವಾಹನ ಸವಾರರು ಮೃತಪಟ್ಟಿದ್ದಾರೆ.

ಇಳಕಲ್ ನಗರದ ಓಂಕಾರ ಟಾಕೀಜ್ ಹತ್ತಿರ ನಿವಾಸಿಗಳಾದ ಅಮರೇಶ ಬೆನಕನಾಳಮಠ(೨೪), ಶರಣಯ್ಯ ಬೆನಕನಾಳಮಠ(೧೭) ಮೃತ ಸಹೋದರರು.

ಗಣೇಶ ಚುತುರ್ಥಿ ಹಬ್ಬಕ್ಕೆಂದು ತಮ್ಮನನ್ನು ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಬರುತ್ತಿದ್ದ ವೇಳೆಯಲ್ಲಿ ರಸ್ತೆ ಬದಿ ನಿಂತಿದ್ದ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಅಮೀನಗಡ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ಕೈಗೊಂಡಿದ್ದಾರೆ. ಬೆಳಕು ಹರಿದರೆ ಮನೆಯಲ್ಲಿ ಗಣೇಶ ಚತುರ್ಥಿಯ ಸಂತಸದಲ್ಲಿರಬೇಕಾದವರ ಮನೆಯಲ್ಲೀದ ಶೋಕ ಆವರಿಸಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande