ಜಾರ್ಖಂಡ್ ವಕೀಲರಿಗೆ ೫ ಲಕ್ಷ ರೂಪಾಯಿ ವೈದ್ಯಕೀಯ ವಿಮೆ
ರಾಂಚಿ, 07 ಸೆಪ್ಟೆಂಬರ್(ಹಿ.ಸ.) : ಆ್ಯಂಕರ್ : ಜಾರ್ಖಂಡ್ ಸರ್ಕಾರ ರಾಜ್ಯದ ವಕೀಲರಿಗೆ ೫ ಲಕ್ಷ ರೂಪಾಯಿ ವೈದ್ಯಕೀಯ ವಿಮೆ ಕಲ್ಪಿಸಲು ನಿರ್ಧರಿಸಿದೆ. ಇದರಿಂದ ರಾಜ್ಯದ ಸುಮಾರು ೩೦ ಸಾವಿರ ವಕೀಲರಿಗೆ ಪ್ರಯೋಜನವಾಗುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಹೇಮಂತ್ ಸೊರೇನ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲ
Jharkhand government has decided to provide


ರಾಂಚಿ, 07 ಸೆಪ್ಟೆಂಬರ್(ಹಿ.ಸ.) :

ಆ್ಯಂಕರ್ : ಜಾರ್ಖಂಡ್ ಸರ್ಕಾರ ರಾಜ್ಯದ ವಕೀಲರಿಗೆ ೫ ಲಕ್ಷ ರೂಪಾಯಿ ವೈದ್ಯಕೀಯ ವಿಮೆ ಕಲ್ಪಿಸಲು ನಿರ್ಧರಿಸಿದೆ. ಇದರಿಂದ ರಾಜ್ಯದ ಸುಮಾರು ೩೦ ಸಾವಿರ ವಕೀಲರಿಗೆ ಪ್ರಯೋಜನವಾಗುವ ಸಾಧ್ಯತೆ ಇದೆ.

ಮುಖ್ಯಮಂತ್ರಿ ಹೇಮಂತ್ ಸೊರೇನ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಸಂಬಂಧ ನಿರ್ಧಾರ ಕೈಗೊಳ್ಳಲಾಗಿದೆ. ೬೫ ವರ್ಷ ಮೀರಿದ ವಕೀಲರಿಗೆ ಕಲ್ಪಿಸಲಾಗುವ ಪಿಂಚಣಿಯನ್ನು ಸಹ ತಿಂಗಳಿಗೆ ೭ ಸಾವಿರ ರೂಪಾಯಿಗಳಿಂದ ೧೪ ಸಾವಿರ ರೂಪಾಯಿಗೆ ಹೆಚ್ಚಿಸುವ ಪ್ರಸ್ತಾವನೆಗೆ ಸಂಪುಟ ಅನುಮೋದನೆ ನೀಡಿದೆ.

ಹೊಸದಾಗಿ ನೋಂದಾಯಿತ ವಕೀಲರಿಗೆ ಪ್ರತಿ ತಿಂಗಳು ೫ ಸಾವಿರ ರೂಪಾಯಿ ಸ್ಟೈಫಂಡ್ ನೀಡುವ ಪ್ರಸ್ತಾವನೆಗೆ ಸಂಪುಟ ಒಪ್ಪಿಗೆ ನೀಡಿದೆ. ವಕೀಲರ ಕಲ್ಯಾಣ ಯೋಜನೆಯನ್ನು ಜಾರಿಗೊಳಿಸುತ್ತಿರುವ ಏಕೈಕ ರಾಜ್ಯ ಜಾರ್ಖಂಡ್ ಆಗಿದ್ದು, ಇಡೀ ದೇಶಕ್ಕೆ ಮಾದರಿಯಾಗಲಿದೆ ಎಂದು ಅಡ್ವೊಕೇಟ್ ಜನರಲ್ ರಾಜೀವ್ ರಂಜನ್ ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande