ನಾಳೆ ಸ್ವಚ್ಛತಾ ಪ್ರತಿಜ್ಞಾ ವಿಧಿ ಬೋಧನೆ ಕಾರ್ಯಕ್ರಮ
ನವದೆಹಲಿ, 16 ಸೆಪ್ಟೆಂಬರ್(ಹಿ.ಸ.) : ಆ್ಯಂಕರ್ : ಸ್ವಚ್ಛತೆಯ ಬಗ್ಗೆ ಜನ ಜಾಗೃತಿ ಮೂಡಿಸುವ ಹಾಗೂ ಕಾರ್ಯ ಪ್ರವೃತ್ತತೆ ಸಾದರಪಡಿಸುವ ಉದ್ದೇಶದ ಸ್ವಚ್ಛಾತಾ ಹೀ ಸೇವಾ ಆಂದೋಲನವನ್ನು ದೇಶಾದ್ಯಂತ ಎಲ್ಲ ಕೇಂದ್ರ ಸರ್ಕಾರಿ ಕಚೇರಿ ಹಾಗೂ ಸಾರ್ವಜನಿಕ ಉದ್ದಿಮೆಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಸ್ವಚ್ಛತೆ ಕುರ
ಿಿಾಿ


ನವದೆಹಲಿ, 16 ಸೆಪ್ಟೆಂಬರ್(ಹಿ.ಸ.) :

ಆ್ಯಂಕರ್ : ಸ್ವಚ್ಛತೆಯ ಬಗ್ಗೆ ಜನ ಜಾಗೃತಿ ಮೂಡಿಸುವ ಹಾಗೂ ಕಾರ್ಯ ಪ್ರವೃತ್ತತೆ ಸಾದರಪಡಿಸುವ ಉದ್ದೇಶದ ಸ್ವಚ್ಛಾತಾ ಹೀ ಸೇವಾ ಆಂದೋಲನವನ್ನು ದೇಶಾದ್ಯಂತ ಎಲ್ಲ ಕೇಂದ್ರ ಸರ್ಕಾರಿ ಕಚೇರಿ ಹಾಗೂ ಸಾರ್ವಜನಿಕ ಉದ್ದಿಮೆಗಳಲ್ಲಿ ಹಮ್ಮಿಕೊಳ್ಳಲಾಗಿದೆ.

ಸ್ವಚ್ಛತೆ ಕುರಿತಾದ ಫಲಕ ಪ್ರದರ್ಶನ ಸ್ವಚ್ಛತಾ ಶ್ರಮದಾನ ಮೊದಲಾದ ಪೂರ್ವಭಾವಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ನಾಳೆ ಸ್ವಚ್ಛತಾ ಪ್ರತಿಜ್ಞಾ ವಿಧಿ ಸ್ವೀಕರಿಸಲಾಗುತ್ತಿದೆ.

ಕರ್ನಾಟಕದಲ್ಲಿ ಕೂಡ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಏಕ್ ಪೇಡ್ ಮಾ ಕೆ ನಾಮ್ ಅಂಗವಾಗಿ ಸಸಿ ಹಾಕುವ ಕಾರ್ಯಕ್ರಮ ಕಚೇರಿಯ ಎಲ್ಲ ಆವರಣಗಳ ವಸತಿ ಸಮುಚ್ಛಯಗಳ ಸ್ವಚ್ಛತಾ ಕಾರ್ಯಕ್ರಮ ಸ್ವಚ್ಛತಾ ಚಟುವಟಿಕೆಗಳಲ್ಲಿ ಗಣನೀಯ ಕೊಡುಗೆ ನೀಡಿದ ಸಿಬ್ಬಂದಿಗೆ ಸಫಾಯಿ ಮಿತ್ರ, ಗೌರವ ಆರೋಗ್ಯ ತಪಾಸಣೆ ಮೊದಲಾದ ಕಾರ್ಯಕ್ರಮಗಳನ್ನು ಅಕ್ಟೋಬರ್ ೨ರವರೆಗೆ ಹಮ್ಮಿಕೊಳ್ಳಲಾಗಿದೆ.

ಬೆಂಗಳೂರಿನ ಆರ್‌ಡಬ್ಲ್ಯೂಎಫ್-ರೈಲ್ವೆ ಗಾಲಿ ಕಾರ್ಖಾನೆಯ ಶಾಖೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಚ್ಛತಾ ಪ್ರತಿಜ್ಞಾವಿಧಿಯನ್ನು ಕೈಗೊಳ್ಳಲಾಯಿತು. ಪ್ರಧಾನ ವ್ಯವಸ್ಥಾಪಕ ಆರ್. ರಾಜಗೋಪಾಲ್ ಅಭಿಯಾನದ ನೇತೃತ್ವ ವಹಿಸಿದ್ದರು. ಅಭಿಯಾನದ ಅಂಗವಾಗಿ ಚಿತ್ರಕಲೆ ಸ್ಪರ್ಧೆ, ವಾಕಥಾನ್, ಕಚೇರಿ ಹಾಗೂ ಆವರಣದ ಸ್ವಚ್ಛತೆ ಜಲಮೂಲಗಳ ಶುದ್ಧೀಕರಣ, ಸಫಾಯಿ ಕರ್ಮಚಾರಿಗಳಿಗೆ ವೈದ್ಯಕೀಯ ಶಿಬಿರ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande