ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟ, ಹೈಜಂಪ್ ನಲ್ಲಿ ಭಾರತದ ಪ್ರವೀಣ್ ಕುಮಾರ್ ಚಿನ್ನದ ಪದಕ
ಪ್ಯಾರಾಲಿಂಪಿಕ್ಸ್ ಪುರುಷರ ಶಾಟ್‌ಪುಟ್‌ನಲ್ಲಿ ; ಭಾರತದ ಹೊಕಾಟೊ ಹೊಟೋಜೆ ಸೆಮಾಗೆ ಕಂಚಿನ ಪದಕ
At the Paris Paralympic Games,


ಪ್ಯಾರಿಸ್‌, 07 ಸೆಪ್ಟೆಂಬರ್(ಹಿ.ಸ.) :

ಆ್ಯಂಕರ್ : ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಪುರುಷರ ಹೈಜಂಪ್ ಟಿ೬೪ ವಿಭಾಗದ ಫೈನಲ್‌ನಲ್ಲಿ ಭಾರತದ ಪ್ರವೀಣ್ ಕುಮಾರ್ ಚಿನ್ನದ ಪದಕ ಗೆದ್ದಿದ್ದಾರೆ. ೨.೦೮ ಮೀಟರ್ ಎತ್ತರ ಜಿಗಿಯುವ ಮೂಲಕ ಅವರು ಹೊಸ ದಾಖಲೆ ಬರೆದಿದ್ದಾರೆ.

ಪುರುಷರ ಶಾಟ್‌ಪುಟ್ ಎಫ್-೫೭ ಫೈನಲ್‌ನಲ್ಲಿ ಹೊಕಾಟೊ ಹೊಟೋಜೆ ಸೆಮಾ ಅವರು ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತದ ಪದಕಗಳ ಸಂಖ್ಯೆ ೨೭ಕ್ಕೆ ಏರಿಕೆಯಾಗಿದ್ದು, ೬ ಚಿನ್ನ, ೯ ಬೆಳ್ಳಿ ಮತ್ತು ೧೨ ಕಂಚಿನ ಪದಕಗಳನ್ನು ಇದು ಒಳಗೊಂಡಿದೆ. ಚಿನ್ನದ ಪದಕ ವಿಜೇತ ಪ್ರವೀಣ್ ಕುಮಾರ್ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಅಭಿನಂದಿಸಿದ್ದಾರೆ.

ಹತ್ತನೇ ದಿನವಾದ ಇಂದು ಭಾರತೀಯ ಅಥ್ಲೀಟ್‌ಗಳು ಈಜು, ಸೈಕ್ಲಿಂಗ್, ಕ್ಯಾನೋ ಮತ್ತು ಇನ್ನಿತರ ವಿಭಾಗಗಳಲ್ಲಿ ಆಡಲಿದ್ದಾರೆ. ಸೈಕ್ಲಿಂಗ್‌ನಲ್ಲಿ ಜ್ಯೋತಿ ಗಡೇರಿಯಾ, ಮಹಿಳೆಯರ ಸಿ೧-೩ನ ರೋಡ್ ರೇಸ್‌ನ ಫೈನಲ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ಯಾರಾ ಕ್ಯಾನೋದಲ್ಲಿ ಪ್ರಾಚಿ ಯಾದವ್, ಮಹಿಳೆಯರ ಸಿಂಗಲ್ ೨೦೦ ಮೀಟರ್ ಸೆಮಿಫೈನಲ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ನವದೀಪ್ ಪುರುಷರ ಜಾವಲಿನ್ ಥ್ರೋ ಎಫ್-೪೧ ಫೈನಲ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಸಿಮ್ರಾನ್ ಮಹಿಳೆಯರ ೨೦೦ ಮೀಟರ್ ಟಿ-೧೨ರ ಫೈನಲ್‌ನಲ್ಲಿ ಪದಕವನ್ನು ಗುರಿಯಾಗಿಸಿಕೊಂಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande