ಬಾಲಿವುಡ್​ ಖ್ಯಾತ ನಿರ್ಮಾಪಕ , ನಟ ರಾಕೇಶ್ ರೋಷನ್ ಜನ್ಮದಿನ
ಮುಂಬೈ, 06 ಸೆಪ್ಟೆಂಬರ್(ಹಿ.ಸ.) : ಆ್ಯಂಕರ್ : ಖ್ಯಾತ ಬಾಲಿವುಡ್ ನಟ ಹೃತಿಕ್ ರೋಷನ್ ತಂದೆ ರಾಕೇಶ್ ರೋಷನ್​ಗೆ ಇಂದು ಜನ್ಮದಿನ. ಅವರಿಗೆ ಎಲ್ಲ ಕಡೆಗಳಿಂದ ವಿಶ್​ಗಳು ಬರುತ್ತಿವೆ. ಅವರು ಇತ್ತೀಚೆಗೆ ಚಲನಚಿತ್ರ ಘೋಷಣೆ ಮಾಡಿಲ್ಲ. ಮಾಡಿದ ಚಲನಚಿತ್ರಗಳ ಕೆಲಸಗಳು ನಡೆಯುತ್ತಿಲ್ಲ. ಇದರಿಂದ ಅವರಿಗೆ ಅನಾರೋಗ್
ಬಿಡುವಿಲ್ಲದ


ಮುಂಬೈ, 06 ಸೆಪ್ಟೆಂಬರ್(ಹಿ.ಸ.) :

ಆ್ಯಂಕರ್ : ಖ್ಯಾತ ಬಾಲಿವುಡ್ ನಟ ಹೃತಿಕ್ ರೋಷನ್ ತಂದೆ ರಾಕೇಶ್ ರೋಷನ್​ಗೆ ಇಂದು ಜನ್ಮದಿನ. ಅವರಿಗೆ ಎಲ್ಲ ಕಡೆಗಳಿಂದ ವಿಶ್​ಗಳು ಬರುತ್ತಿವೆ. ಅವರು ಇತ್ತೀಚೆಗೆ ಚಲನಚಿತ್ರ ಘೋಷಣೆ ಮಾಡಿಲ್ಲ. ಮಾಡಿದ ಚಲನಚಿತ್ರಗಳ ಕೆಲಸಗಳು ನಡೆಯುತ್ತಿಲ್ಲ. ಇದರಿಂದ ಅವರಿಗೆ ಅನಾರೋಗ್ಯ ಉಂಟಾಗಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ಈ ಮೊದಲು ರಾಕೇಶ್ ಅವರಿಗೆ ಕ್ಯಾನ್ಸರ್ ಆಗಿತ್ತು. ಅದನ್ನು ಅವರು ಗೆದ್ದು ಬಂದಿದ್ದರು. ತದನಂತರ ಅವರು ಚಲನಚಿತ್ರ ಕೆಲಸಗಳನ್ನು ಮಾಡುತ್ತಿಲ್ಲ.

ರಾಕೇಶ್ ರೋಷನ್ ಅವರು ಹೆಚ್ಚು ವಿದ್ಯಾವಂತರಲ್ಲದಿದ್ದರೂ ಚಲನಚಿತ್ರಗಳ ವಿಷಯದಲ್ಲಿ ಮಾತ್ರ ಪರಿಣಿತರು. ಆದರೆ, ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ದರೂ, ಚಿತ್ರರಂಗ ಜಗತ್ತಿನ ದಂತಕಥೆಗಳ ಬಗ್ಗೆ ಮಾತನಾಡುವ ಇವರ ಹೆಸರು ಎಲ್ಲಿಯೂ ಕೇಳಿ ಬರುವುದಿಲ್ಲ ಎಂದು ಜನರು ಆಗಾಗ್ಗೆ ಹೇಳುತ್ತಲೇ ಇರುತ್ತಾರೆ. ಆದರೆ, ಈ ಬಗ್ಗೆ ರಾಕೇಶ್ ಅವರಿಗೆ ಯಾವುದೇ ಬೇಸರವಿಲ್ಲವಂತೆ.ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ತಮಗೆ ಯಾವುದೇ ವಿಶೇಷ ವಿದ್ಯಾರ್ಹತೆಗಳಿಲ್ಲ. ಏಕೆಂದರೆ, ನಾನು ಶಾಲೆಗೆ ಹೋಗಿ ಕಲಿತಿಲ್ಲ ಎಂದು ಹೇಳಿಕೊಂಡಿದ್ದಾರೆ.

ಹೌದು, ಇತ್ತೀಚೆಗೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ರಾಕೇಶ್ ತಮ್ಮ ವಿದ್ಯಾಭ್ಯಾಸ, ಸಿನಿಮಾ ಪ್ರೀತಿ ಎಲ್ಲವನ್ನು ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.ಚಿತ್ರ ರಂಗದ ಬಗ್ಗೆ ಮಾತನಾಡುವಾಗ ಬಾಲಿವುಡ್ ನ ಮಂದಿ ನನ್ನ ಬಗ್ಗೆ ಮಾತನಾಡದಿರಬಹುದು. ಅದರ ಬಗ್ಗೆ ನನಗೆ ಯಾವುದೇ ಬೇಜಾರಿಲ್ಲ. ಏಕೆಂದರೆ, ಜನರಿಗೆ ನನ್ನ ಬಗ್ಗೆ ತಿಳಿದಿದೆ, ನಾನು ಅವರಿಗೆ ಹತ್ತಿರವಾಗಿದ್ದೇನೆ“ ಎನ್ನುತ್ತಾರೆ ರಾಕೇಶ್.

ರಾಕೇಶ್ ರೋಷನ್​ಗೆ ಈಗ 75 ವರ್ಷ ವಯಸ್ಸು. ಅವರಲ್ಲಿ ಈಗ ಮೊದಲಿನಷ್ಟು ಚೈತನ್ಯ ಉಳಿದುಕೊಂಡಿಲ್ಲ. ಅವರು ಕೊನೆಯದಾಗಿ ನಿರ್ದೇಶನ ಮಾಡಿದ್ದು ‘ಕ್ರಿಷ್ 3’ ಚಿತ್ರವನ್ನು. ಈ ಚಲನ ಚಿತ್ರ ಬಿಡುಗಡೆ ಆಗಿದ್ದು 2013ರಲ್ಲಿ. ಅಂದರೆ, 11 ವರ್ಷಗಳಿಂದ ಅವರು ಯಾವುದೇ ಚಲನಚಿತ್ರ ನಿರ್ದೇಶನ ಮಾಡಿಲ್ಲ. ‘ಕ್ರಿಷ್ 4’ ಚಿತ್ರವನ್ನು ರಾಕೇಶ್ ಘೋಷಣೆ ಮಾಡಿ ಬಹಳ ಸಮಯ ಕಳೆದಿದೆ. ಆದರೆ, ಈ ಚಿತ್ರದ ಕೆಲಸಗಳು ಆರಂಭ ಆಗಿಲ್ಲ.

ಹೃತಿಕ್ ಅವರು ಬೇರೆ ಸಿನಿಮಾಗಳ ಕೆಲಸಗಳ ಕಾರಣದಿಂದ ಬಿಡುವಿಲ್ಲದ ಇದ್ದ ಕಾರಣಕ್ಕೆ ‘ಕ್ರಿಶ್ 4’ ಸೆಟ್ಟೇರದೇ ಇದ್ದರೂ ಇರಬಹುದು ಎಂಬುದು ಕೆಲವರ ವಾದ. ಆದರೆ, ಏನೇ ಮಾಡಿದರೂ ಚಲನಚಿತ್ರ ಘೋಷಣೆ ಆಗಿ ಚಿತ್ರೀಕರಣ ಕೆಲಸ ಆರಂಭಿಸಲು ಇಷ್ಟೆಲ್ಲ ಸಮಯ ಬೇಡ. ಅದರಲ್ಲೂ ಮಗನ ಚಿತ್ರಕ್ಕೆ ಇಷ್ಟೆಲ್ಲ ವಿಳಂಬ ಏಕೆ ಎನ್ನುವ ಪ್ರಶ್ನೆಯೂ ಇದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande