ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟ: ಭಾರತದ ಪದಕಗಳ ಸಂಖ್ಯೆ ೨೫ಕ್ಕೆ ಏರಿಕೆ
ಪ್ಯಾರಿಸ್ , 06 ಸೆಪ್ಟೆಂಬರ್(ಹಿ.ಸ.): ಆ್ಯಂಕರ್ : ೨೦೨೪ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲ್ಲಿ, ನಿನ್ನೆ ನಡೆದ ಪ್ಯಾರಾ ಜೂಡೋ ಪುರುಷರ ಜೆ ೧ ರ ೬೦ ಕೆ.ಜಿ ಸ್ಪರ್ಧೆಯಲ್ಲಿ ಭಾರತದ ಕಪಿಲ್ ಪರ್ಮಾರ್, ಬ್ರೆಜಿಲ್‌ನ ಎಲಿಯೆಲ್ಟನ್ ಡಿ ಒಲಿವೇರಾ ಅವರನ್ನು ೧೦-೦ ಅಂಕಗಳಿಂದ ಸೋಲಿಸುವ ಮೂಲಕ ಕಂಚಿನ ಪದಕವನ್ನು ಪ
At at Paris Paralympics 2024 India


ಪ್ಯಾರಿಸ್ , 06 ಸೆಪ್ಟೆಂಬರ್(ಹಿ.ಸ.):

ಆ್ಯಂಕರ್ : ೨೦೨೪ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲ್ಲಿ, ನಿನ್ನೆ ನಡೆದ ಪ್ಯಾರಾ ಜೂಡೋ ಪುರುಷರ ಜೆ ೧ ರ ೬೦ ಕೆ.ಜಿ ಸ್ಪರ್ಧೆಯಲ್ಲಿ ಭಾರತದ ಕಪಿಲ್ ಪರ್ಮಾರ್, ಬ್ರೆಜಿಲ್‌ನ ಎಲಿಯೆಲ್ಟನ್ ಡಿ ಒಲಿವೇರಾ ಅವರನ್ನು ೧೦-೦ ಅಂಕಗಳಿಂದ ಸೋಲಿಸುವ ಮೂಲಕ ಕಂಚಿನ ಪದಕವನ್ನು ಪಡೆದರು. ಇದು ಜೂಡೋದಲ್ಲಿ ಭಾರತದ ಮೊದಲ ಪ್ಯಾರಾಲಿಂಪಿಕ್ ಪದಕವಾಗಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಕಪಿಲ್ ಪರ್ಮಾರ್ ಅವರನ್ನು ಅಭಿನಂದಿಸಿದ್ದು, ಕಪಿಲ್ ಅವರು ತಾವು ಎದುರಿಸಿದ ಎಲ್ಲಾ ಅಡೆತಡೆಗಳನ್ನು ಸಮರ್ಥವಾಗಿ ನಿಭಾಯಿಸಿ, ಪ್ಯಾರಾಲಿಂಪಿಕ್ಸ್‌ನ ಜೂಡೋ ಸ್ಪರ್ಧೆಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಇತಿಹಾಸ ಸೃಷ್ಟಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.

ಉಪರಾಷ್ಟ್ರಪತಿ ಜಗದೀಪ್ ಧನಕರ್, ಕಪಿಲ್ ಅವರ ಈ ಯಶಸ್ಸು, ಪ್ರಾಮಾಣಿಕ ಪ್ರಯತ್ನ, ಸಮರ್ಪಣೆ ಮತ್ತು ಕೌಶಲ್ಯಗಳ ಫಲಿತಾಂಶವಾಗಿದೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕೂಡ ಕಪಿಲ್ ಪರ್ಮಾರ್ ಅವರನ್ನು ಅಭಿನಂದಿಸಿದ್ದು, ಇದು ಅತ್ಯಂತ ಸ್ಮರಣೀಯ ಕ್ರೀಡಾ ಸಾಧನೆಯಾಗಿದ್ದು, ಇದೊಂದು ವಿಶೇಷ ಪದಕವಾಗಿದೆ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ನಿನ್ನೆ ಕ್ರೀಡಾಕೂಟದ ೮ನೇ ದಿನದ ಅಂತ್ಯಕ್ಕೆ ಭಾರತ, ೫ ಚಿನ್ನ, ೯ ಬೆಳ್ಳಿ ಮತ್ತು ೧೧ ಕಂಚಿನೊಂದಿಗೆ ಒಟ್ಟು ೨೫ ಪದಕಗಳನ್ನು ಗಳಿಸಿ ಪದಕ ಪಟ್ಟಿಯಲ್ಲಿ ೧೬ನೇ ಸ್ಥಾನದಲ್ಲಿದೆ.

ಅಥ್ಲೆಟಿಕ್ಸ್‌ನಲ್ಲಿ ಭಾರತದ ಸಿಮ್ರಾನ್ ಶರ್ಮಾ ನಿನ್ನೆ ನಡೆದ ಮಹಿಳೆಯರ ೧೦೦ ಮೀಟರ್ ಟಿ-೧೨ ಫೈನಲ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸಿ ಪದಕದಿಂದ ವಂಚಿತರಾದರು. ನಾಲ್ಕು ಆಟಗಾರರ ಫೈನಲ್‌ನಲ್ಲಿ ಸಿಮ್ರಾನ್ ೧೨.೩೧ ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು.

ಪ್ಯಾರಾಲಿಂಪಿಕ್ಸ್‌ನಲ್ಲಿ ತನ್ನ ಹಿಂದಿನ ಅತ್ಯುತ್ತಮ ಪದಕ ದಾಖಲೆಯನ್ನು ಹಿಂದಿಕ್ಕಿ ಮುನ್ನಡೆದಿರುವ ಭಾರತ ತಂಡ ಇಂದೂ ಕೂಡ ಉತ್ತಮ ಫಲಿತಾಂಶ ಗಳಿಸುವತ್ತ ದೃಷ್ಟಿ ನೆಟ್ಟಿದೆ.

ಇಂದು, ಪುರುಷರ ಹೈಜಂಪ್ ಫೈನಲ್‌ನಲ್ಲಿ ಪ್ರವೀಣ್ ಕುಮಾರ್, ಪಾವರ್‌ಲಿಫ್ಟಿಂಗ್‌ನ ಮಹಿಳೆಯರ ೬೭ ಕೆ.ಜಿ ವಿಭಾಗದ ಫೈನಲ್‌ನಲ್ಲಿ ಕಸ್ತೂರಿ ರಾಜಾಮಣಿ, ಮಹಿಳೆಯರ ಜಾವೆಲಿನ್ ಫೈನಲ್‌ನಲ್ಲಿ ಭಾವನಾಬೆನ್ ಅಜಬಾಜಿ ಚೌಧರಿ, ಪುರುಷರ ಶಾಟ್‌ಪುಟ್ ಫೈನಲ್‌ನಲ್ಲಿ ಸೋಮನ್ ರಾಣಾ ಮತ್ತು ಹೊಕಾಟೊ ಹೊಟೊಜೆ ಸೆಮಾ ಹಾಗೂ ಪುರುಷರ ಜಾವೆಲಿನ್‌ನ ಫೈನಲ್‌ನಲ್ಲಿ ದಿಪೇಶ್ ಕುಮಾರ್ ಭಾರತಕ್ಕೆ ಪದಕ ಗೆಲ್ಲಿಸಿ ಕೊಡುವ ನಿರೀಕ್ಷೆ ಹೊಂದಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande