ಬಳ್ಳಾರಿ: ಪ್ರೋ-ಕಬಡ್ಡಿ ಪಂದ್ಯಾವಳಿ ಮೂಲಕ ಏಡ್ಸ್ ತಡೆಗೆ ಜಾಗೃತಿ
ಬಳ್ಳಾರಿ, 05 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಹೆಚ್‍ಐವಿ ಎಂಬ ಮಹಾಮಾರಿಯನ್ನು ಹೋಗಲಾಡಿಸಲು ಹೆಚ್‍ಐವಿ-ಏಡ್ಸ್ ವೈರಸ್ ಬಗ್ಗೆ ಹದಿಹರೆಯದವರು ಜಾಗೃತಿ ಹೊಂದಬೇಕು ಎಂದು ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್ ಅವರು ಹೇಳಿದ್ದಾರೆ. ಸಮಾಜವನ್ನು ಹೆಚ್‍ಐವಿಯಿಂದ ಬಾಧಿತರಾಗದಂತೆ ಕಾಪಾಡುವ ಹ
ಬಳ್ಳಾರಿ:  ಪೆÇ್ರೀ-ಕಬಡ್ಡಿ ಪಂದ್ಯಾವಳಿ ಮೂಲಕ ಏಡ್ಸ್ ತಡೆಗೆ ಜಾಗೃತಿ


ಬಳ್ಳಾರಿ:  ಪೆÇ್ರೀ-ಕಬಡ್ಡಿ ಪಂದ್ಯಾವಳಿ ಮೂಲಕ ಏಡ್ಸ್ ತಡೆಗೆ ಜಾಗೃತಿ


ಬಳ್ಳಾರಿ:  ಪೆÇ್ರೀ-ಕಬಡ್ಡಿ ಪಂದ್ಯಾವಳಿ ಮೂಲಕ ಏಡ್ಸ್ ತಡೆಗೆ ಜಾಗೃತಿ


ಬಳ್ಳಾರಿ, 05 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಹೆಚ್‍ಐವಿ ಎಂಬ ಮಹಾಮಾರಿಯನ್ನು ಹೋಗಲಾಡಿಸಲು ಹೆಚ್‍ಐವಿ-ಏಡ್ಸ್ ವೈರಸ್ ಬಗ್ಗೆ ಹದಿಹರೆಯದವರು ಜಾಗೃತಿ ಹೊಂದಬೇಕು ಎಂದು ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್ ಅವರು ಹೇಳಿದ್ದಾರೆ.

ಸಮಾಜವನ್ನು ಹೆಚ್‍ಐವಿಯಿಂದ ಬಾಧಿತರಾಗದಂತೆ ಕಾಪಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲೆ ಇದ್ದು, ಇತರರಿಗೂ ಜಾಗೃತಿ ನೀಡುವ ಮೂಲಕ ಆರೋಗ್ಯ ಇಲಾಖೆಯು ಏಡ್ಸ್ ನಿಯಂತ್ರಣಕ್ಕಾಗಿ ಕೈಗೊಳ್ಳುವ ಜಾಗೃತಿಯ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈಜೊಡಿಸಬೇಕು ಎಂದು ಅವರು ತಿಳಿಸಿದರು.

ರಾಜ್ಯ ಏಡ್ಸ್ ಪ್ರಿವೆನ್‍ಷನ್ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಮಹಾನಗರ ಪಾಲಿಕೆ, ಬಳ್ಳಾರಿ ಜಿಲ್ಲಾ ಅಮೇಚೂರು ಕಬಡ್ಡಿ ಅಸೊಷಿಯೇಷನ್ ಸಂಯುಕ್ತಾಶ್ರಯದಲ್ಲಿ ಯುವಜನತೆಗೆ ಹೆಚ್‍ಐವಿ-ಏಡ್ಸ್ ಜಾಗೃತಿ ನೀಡಲು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಅಂತರ್ ಪದವಿ ಕಾಲೇಜು ವಿದ್ಯಾರ್ಥಿಗಳಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಪ್ರೋ-ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಹದಿಹರೆಯದವರಲ್ಲಿ ಹೆಚ್‍ಐವಿ ಪ್ರಕರಣಗಳು ಹೆಚ್ಚು ಕಂಡುಬರುತ್ತಿವೆ ಎಂಬ ವರದಿ ಆಂತಂಕಕಾರಿಯಾಗಿದ್ದು, ತಂದೆ ತಾಯಿಯರು ಕಂಡ ಕನಸು ನನಸು ಮಾಡುವ ಜವಾಬ್ದಾರಿಗಳನ್ನು ನೆನಪಿನಲ್ಲಿಟ್ಟುಕೊಂಡು ಲೈಂಗಿಕ ಆರೋಗ್ಯದ ಬಗ್ಗೆ ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು.

ಆಕಸ್ಮಿಕ ಘಟನೆ ನಡೆದಲ್ಲಿ ಐಸಿಟಿಸಿ ಕೇಂದ್ರಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬಹುದಾಗಿದೆ ಎಂದರಲ್ಲದೇ, ಕ್ರೀಡಾಕೂಟಕ್ಕೆ ಎಲ್ಲ ಹಂತದಲ್ಲಿ ಸಹಕರಿಸಿದ ಬಳ್ಳಾರಿ ಅಮೇಚೂರ ಕಬಡ್ಡಿ ಅಸೊಸಿಯೇಷನ್‍ಗೆ ಅಭಿನಂದನೆ ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶಬಾಬು ಮಾತನಾಡಿ, ಜಿಲ್ಲೆಯಲ್ಲಿ ಹೆಚ್‍ಐವಿ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದು, ಒಟ್ಟಾರೆ ಪ್ರಕರಣಗಳಲ್ಲಿ ಯುವಜನತೆಯ ಸಂಖ್ಯೆ ಹೆಚ್ಚುತ್ತಿದೆ ಎಂದು ಹೇಳಿದರು.

ಸರ್ಕಾರಿ, ಖಾಸಗಿ ಕಾಲೇಜು ವಿದ್ಯಾರ್ಥಿಗಳಿಂದ, ಬಸ್ ನಿಲ್ದಾಣ, ಮಾರ್ಕೆಟ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಶ್ ಮಾಬ್ ನೃತ್ಯದ ಮೂಲಕ ಜಾಗೃತಿ, ಕಲಾತಂಡಗಳಿಂದ ಗ್ರಾಮಗಳಲ್ಲಿ ಜಾಗೃತಿ, ಕಾಲೇಜು ವಿಧ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ, ಜಿಲ್ಲೆಯ ಆಯ್ದ ನಗರಗಳಲ್ಲಿ ಹೋಡಿರ್ಂಗ್ ಅಳವಡಿಸಿ ಜಾಗೃತಿ ನೀಡಲಾಗುತ್ತಿದ್ದು, ಅಸುರಕ್ಷಿತ ಲೈಂಗಿಕತೆಯಿಂದ ದೂರವಿರಲು, ಮದುವೆ ಮುನ್ನ ಬ್ರಹ್ಮಚಾರ್ಯ ಪಾಲನೆಗೆ ಮಹತ್ವ ನೀಡಬೇಕು ಎಂದರು.

ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ.ಇಂದ್ರಾಣಿ.ವಿ ಅವರು ಮಾತನಾಡಿ ಹೆಚ್‍ಐವಿ/ಏಡ್ಸ್ ಕಾರ್ಯ ಚಟುವಟಿಕೆಗಳಿಗೆ ವ್ಯಕ್ತಿಗತ ಮತ್ತು ಸಮುದಾಯದಲ್ಲಿ ಸೋಂಕಿನಿಂದ ಉಂಟಾಗುತ್ತಿರುವ ಸಮಸ್ಯೆಗಳು ಮತ್ತು ಇದರ ಬಗ್ಗೆ ಜಾಗೃತಿ ಹೆಚ್ಚಿಸುವುದು ಹಾಗೂ ಏಡ್ಸ್ ನಿಯಂತ್ರಣ ಕಾರ್ಯಕ್ರಮಗಳತ್ತ ಪ್ರತಿಯೊಬ್ಬರ ಗಮನ ಸೆಳೆಯುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದರು.

ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ರಮೇಶ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಉಪಮಹಾಪೌರರಾದ ಡಿ.ಸುಕುಂ, ಮುಖಂಡರಾದ ನಾಗಲಕೇರಿ ಗೋವಿಂದ, ಪಯಾಜ್, ಜಿಲ್ಲಾ ಏಡ್ಸ್ ಮೇಲ್ವಿಚಾರಕ ಗಿರೀಶ್, ಜಿಲ್ಲಾ ಅರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಕಬಡ್ಡಿ ಅಸೊಷಿಯೇಷನ್ ಪಧಾಧಿಕಾರಿಗಳಾದ ಗೋವಿಂದ, ಪಂಪಾಪತಿ, ಸುಂಕಪ್ಪ, ಷಣ್ಮುಖಪ್ಪ, ಸಿ.ಎಂ.ಸೂರ್ಯನಾರಾಯಣ ಸೇರಿದಂತೆ ದೈಹಿಕ ಶಿಕ್ಷಣಾಧಿಕಾರಿಗಳು ಹಾಗೂ ಏಡ್ಸ್ ನಿಯಂತ್ರಣ ವಿಭಾಗದ ಸಿಬ್ಬಂದಿಯವರು, ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ಪ್ರೊ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ನಾಲ್ಕು ಮಹಿಳಾ ಹಾಗೂ ಆರು ಪುರುಷ ತಂಡಗಳು ಭಾಗವಹಿಸಿದ್ದವು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande