ನೀವು ಬಸ್ಸು, ಲಾರಿ, ವ್ಯಾನ್ ಚಾಲಕರಾಗಬೇಕೇ? – ಇಲ್ಲಿದೆ ಸುವರ್ಣಾವಕಾಶ
ಬೆಂಗಳೂರು, 04 ಸೆಪ್ಟೆಂಬರ್(ಹಿ.ಸ.) : ಆ್ಯಂಕರ್ : ನೀವು ಬಸ್ಸು, ಲಾರಿ, ವ್ಯಾನ್ ಚಾಲಕರಾಗಬೇಕೇಂಬ ಕನಸು ಕಾಣುತ್ತಿದ್ದೀರಾ. ಹಾಗಿದರೆ ನಿಮಗೊಂದು ಅವಕಾಶವಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ತರಬೇತಿ ಕೇಂದ್ರದಲ್ಲಿ ಸಾರ್ವಜನಿಕರಿಗೆ ಲಘು ಮತ್ತು ಭಾರಿ ವಾಹನಗಳ ಚಾಲನಾ ತರಬೇತಿ ನೀಡಲಾಗುತ್ತಿದೆ. ತರಬ
BMTC


ಬೆಂಗಳೂರು, 04 ಸೆಪ್ಟೆಂಬರ್(ಹಿ.ಸ.) :

ಆ್ಯಂಕರ್ : ನೀವು ಬಸ್ಸು, ಲಾರಿ, ವ್ಯಾನ್ ಚಾಲಕರಾಗಬೇಕೇಂಬ ಕನಸು ಕಾಣುತ್ತಿದ್ದೀರಾ. ಹಾಗಿದರೆ ನಿಮಗೊಂದು ಅವಕಾಶವಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ತರಬೇತಿ ಕೇಂದ್ರದಲ್ಲಿ ಸಾರ್ವಜನಿಕರಿಗೆ ಲಘು ಮತ್ತು ಭಾರಿ ವಾಹನಗಳ ಚಾಲನಾ ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆಯಲು ಆಸಕ್ತರು ಅರ್ಜಿ ಸಲ್ಲಿಸಲು, ಅರ್ಹತೆ ಹಾಗೂ ದಾಖಲೆಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.

ಲಘು ವಾಹನ ಚಾಲನಾ ತರಬೇತಿ:

ವಯೋಮಿತಿ : ಕನಿಷ್ಟ 18 ವರ್ಷ.

ದಾಖಲೆಗಳು:

– ಜನನ ಪ್ರಮಾಣ ಪತ್ರ ಅಥವಾ ಎಸ್.ಎಸ್.ಎಲ್.ಸಿ ಅಂಕಪಟ್ಟಿ ಅಥವಾ ಟಿ.ಸಿ ಅಥವಾ ನೋಟರಿಯಿಂದ ಪ್ರಮಾಣ ಪತ್ರ.

– ಆಧಾರ್ ಕಾರ್ಡ್.

– 5 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ.

ಭಾರಿ ವಾಹನ ಚಾಲನಾ ತರಬೇತಿ:

ವಯೋಮಿತಿ: ಕನಿಷ್ಟ 20 ವರ್ಷ.

ದಾಖಲೆಗಳು:

– ಜನನ ಪ್ರಮಾಣ ಪತ್ರ ಅಥವಾ ಎಸ್.ಎಸ್.ಎಲ್.ಸಿ ಅಂಕಪಟ್ಟಿ ಅಥವಾ ಟಿ.ಸಿ ಅಥವಾ ನೋಟರಿಯಿಂದ ಪ್ರಮಾಣ ಪತ್ರ.

– ಆಧಾರ್ ಕಾರ್ಡ್.

– 5 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ.

– ಲಘು ವಾಹನ ಪರವಾನಗಿ ಪಡೆದ ದಿನಾಂಕದಿಂದ ಒಂದು ವರ್ಷ ಪೂರ್ಣಗೊಂಡಿರಬೇಕು.

ತರಬೇತಿ ಶುಲ್ಕ ಎಷ್ಟು

ವಸತಿ ಸಹಿತ:

– ಲಘು ವಾಹನ: 26 ದಿನಗಳ ವಾಹನ ಚಾಲನಾ ತರಬೇತಿ – 13,000 ರೂ.

– ಭಾರಿ ವಾಹನ: 26 ದಿನಗಳ ವಾಹನ ಚಾಲನಾ ತರಬೇತಿ – 16,700 ರೂ.

ವಸತಿ ರಹಿತ:

– ಲಘು ವಾಹನ: 26 ದಿನಗಳ ವಾಹನ ಚಾಲನಾ ತರಬೇತಿ – 7,000 ರೂ.

– ಭಾರಿ ವಾಹನ: 26 ದಿನಗಳ ವಾಹನ ಚಾಲನಾ ತರಬೇತಿ – 11,000 ರೂ.

ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರಿಗೆ:

– ಲಘು ವಾಹನ: 6 ದಿನಗಳ ಚಾಲನಾ ಕೌಶಲ್ಯ ಅಭಿವೃದ್ದಿ ತರಬೇತಿ – 4,250 ರೂ. (ವಸತಿ ಸಹಿತ) / 3,000 ರೂ. (ವಸತಿ ರಹಿತ).

– ಭಾರಿ ವಾಹನ: 6 ದಿನಗಳ ಚಾಲನಾ ಕೌಶಲ್ಯ ಅಭಿವೃದ್ದಿ ತರಬೇತಿ – 6,000 ರೂ. (ವಸತಿ ಸಹಿತ) / 5,000 ರೂ. (ವಸತಿ ರಹಿತ).

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ:

– 77609 91085

– 6364858520

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande