ಲಕ್ನೋ, 04ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : 2027ರಲ್ಲಿ ಸಮಾಜವಾದಿ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದ ಬುಲ್ಡೋಜರ್‌ಗಳು ಗೋರಖ್‌ಪುರದತ್ತ ಸಾಗಲಿವೆ ಎಂಬ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಪ್ರಚೋದನಕಾರಿ ಹೇಳಿಕೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಯೋಗಿ ತಿರುಗೇಟು ನೀಡಿ, ಬುಲ್ಡೋಜರ್ ನಿರ್ವಹಣೆಗೆ ದೈಹಿಕ ಶಕ್ತಿಗಿಂತ ಬುದ್ಧಿ, ಧೈರ್ಯ ಮುಖ್ಯ ಎಂದಿದ್ದಾರೆ.
ಲಕ್ನೋದ ಲೋಕಭವನದಲ್ಲಿ ಇಂದು ಬುಧವಾರ ಆಯೋಜಿಸಿದ್ದ ನೇಮಕಾತಿ ಪತ್ರ ವಿತರಣಾ ಕಾರ್ಯಕ್ರಮವೊಂದರಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಸಮಾಜದಲ್ಲಿ ಬಿರುಕುಗಳನ್ನು ಸೃಷ್ಟಿಸುವ ಮತ್ತು ರಾಷ್ಟ್ರವನ್ನು ವಿಭಜಿಸುವ ನೀತಿಗಳನ್ನು ಅನುಸರಿಸುವ ಇತಿಹಾಸವನ್ನು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಹೊಂದಿದೆ. ಬುಲ್ಡೋಜರ್ ಅನ್ನು ನಿರ್ವಹಿಸಲು ಕೇವಲ ದೈಹಿಕ ಶಕ್ತಿಗಿಂತ ಹೆಚ್ಚಿನದು ಅಗತ್ಯವಿದೆ ಎಂದಿದ್ದಾರೆ. ಇದು ಬುದ್ಧಿ ಮತ್ತು ಧೈರ್ಯ ಎರಡನ್ನೂ ಬೇಡುತ್ತದೆ. ಬುಲ್ಡೋಜರ್ ಅನ್ನು ನಿರ್ವಹಿಸಲು ಎಲ್ಲರೂ ಸೂಕ್ತವಲ್ಲ ಎಂದು ಅವರು ಒತ್ತಿ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್