ಫಿಲಿಫೈನ್ಸ್‌ನಲ್ಲಿ ಭಾರಿ ಮಳೆಯಿಂದ ಭೂಕುಸಿತ – 14 ಮಂದಿ ದುರ್ಮರಣ
ಮನಿಲಾ, 03 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಫಿಲಿಫೈನ್ಸ್‌ನಲ್ಲಿ ಚಂಡಮಾರುತದ ಪರಿಣಾಮ ಭಾರಿ ಮಳೆಯಿಂದ ಉಂಟಾದ ಪ್ರವಾಹ ಹಾಗೂ ಭೂಕುಸಿತದಿಂದಾಗಿ 14 ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ದೇಶಾದ್ಯಂತ ವಿಮಾನಗಳ ಹಾರಾಟ ಹಾಗೂ ಹಡಗು ಸಂಚಾರ ಸ್ಥಗಿತಗೊಂಡಿದೆ. ಇದರ ಪರಿಣಾಮ ಸಾವಿರಾರು ಜನ
ಫಿಲಿಫೈನ್ಸ್‌ನಲ್ಲಿ ಭಾರೀ ಮಳೆಯಿಂದ ಭೂಕುಸಿತ – 14 ಮಂದಿ ದುರ್ಮರಣ


ಮನಿಲಾ, 03 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಫಿಲಿಫೈನ್ಸ್‌ನಲ್ಲಿ ಚಂಡಮಾರುತದ ಪರಿಣಾಮ ಭಾರಿ ಮಳೆಯಿಂದ ಉಂಟಾದ ಪ್ರವಾಹ ಹಾಗೂ ಭೂಕುಸಿತದಿಂದಾಗಿ 14 ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.

ದೇಶಾದ್ಯಂತ ವಿಮಾನಗಳ ಹಾರಾಟ ಹಾಗೂ ಹಡಗು ಸಂಚಾರ ಸ್ಥಗಿತಗೊಂಡಿದೆ. ಇದರ ಪರಿಣಾಮ ಸಾವಿರಾರು ಜನ ಪ್ರಯಾಣಿಕರು ಪರದಾಡುತ್ತಿದ್ದಾರೆ.

ದೇಶದ ಯಾಗಿ ಇಲೋಕೋಸ್ ನಾರ್ಟೆ ಪ್ರಾಂತ್ಯದ ಪಾವೊಯ್ ನಗರ ಸೇರಿದಂತೆ ದಕ್ಷಿಣ ಚೀನಾ ಸಮುದ್ರದ ಭಾಗದಲ್ಲಿ ಗಂಟೆಗೆ 75-125 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರಿಂದಾಗಿ ಮಳೆ ಹೆಚ್ಚಾಗುವ ಆತಂಕ ಇದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ.

ನವೋಟಾಸ್ ಬಂದರಿನ ಮನಿಲಾ ಕೊಲ್ಲಿಯಲ್ಲಿ ಲಂಗರು ಹಾಕಲಾಗಿದ್ದ ಕಮಿಲ್ಲಾ ಎಂಬ ತರಬೇತಿ ಹಡಗು ಭಾರಿ ಅಲೆಗಳ ಹೊಡೆತಕ್ಕೆ ಸಿಲುಕಿ ಮತ್ತೊಂದು ಹಡಗಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮದಿಂದ ಹಡಗು ಬೆಂಕಿಗೆ ಆಹುತಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರಿ ಮಳೆಯಿಂದ ದೇಶದ ರಾಜಧಾನಿ ಮನಿಲಾ ಸೇರಿದಂತೆ ಹಲವು ಭಾಗಗಳಲ್ಲಿ ಶಾಲೆಗಳು ಮತ್ತು ಸರ್ಕಾರಿ ಕಚೇರಿಗಳು ಇಂದು ಸ್ಥಗಿತಗೊಂಡಿವೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande