ಬಾಲಿವುಡ್ ಚಿತ್ರೀಕರಣಕ್ಕಾಗಿ ಹಂಪಿಗೆ ರಶ್ಮಿಕಾ ಮಂದಣ್ಣ ಭೇಟಿ
ಹಂಪಿ, 03 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣನವರು ವಿಜಯನಗರ ಜಿಲ್ಲೆಯ ಹಂಪಿಗೆ ಭೇಟಿ ನೀಡಲಿದ್ದಾರೆ. ಭೇಟಿಯ ಬಗ್ಗೆ ಹಂಪಿ ಪ್ರಾಧಿಕಾರಕ್ಕೆ ಮಾಹಿತಿ ನೀಡಲಾಗಿದೆ. ನಟಿ ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ 2’ ಮತ್ತು ‘ಛಾವಾ’ ಚಲನ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.
ಬಾಲಿವುಡ್ ಸಿನಿಮಾ ಶೂಟಿಂಗ್‌ಗಾಗಿ ಹಂಪಿಗೆ ಬರಲಿದ್ದಾರೆ ರಶ್ಮಿಕಾ ಮಂದಣ್ಣ


ಹಂಪಿ, 03 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣನವರು ವಿಜಯನಗರ ಜಿಲ್ಲೆಯ ಹಂಪಿಗೆ ಭೇಟಿ ನೀಡಲಿದ್ದಾರೆ. ಭೇಟಿಯ ಬಗ್ಗೆ ಹಂಪಿ ಪ್ರಾಧಿಕಾರಕ್ಕೆ ಮಾಹಿತಿ ನೀಡಲಾಗಿದೆ.

ನಟಿ ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ 2’ ಮತ್ತು ‘ಛಾವಾ’ ಚಲನ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಸದ್ಯ ರಶ್ಮಿಕಾ ಮುಂಬರುವ ಚಲನ ಚಿತ್ರದ ಬಗ್ಗೆ ಮಾಹಿತಿ ಸಿಕ್ಕಿದೆ. ರಶ್ಮಿಕಾ ನಟಿಸಲಿರುವ ಹೊಸ ಚಲನ ಚಿತ್ರಕ್ಕಾಗಿ ಕರ್ನಾಟಕದ ವಿಜಯನಗರ ಜಿಲ್ಲೆಯ ಹಂಪಿಗೆ ಬರಲಿದ್ದಾರೆ.

ಈ ಚಲನ ಚಿತ್ರದ ಚಿತ್ರೀಕರಣದಲ್ಲಿ ನಟಿ ಭಾಗಿಯಾಗಲಿದ್ದಾರೆ.

ಕನ್ನಡತಿ ರಶ್ಮಿಕಾ ಮಂದಣ್ಣ ಕಲ್ಯಾಣ ಕರ್ನಾಟಕಕ್ಕೆ ಬರುತ್ತಿದ್ದಾರೆ. ಹಾಗಂತ ಕನ್ನಡ ಚಲನಚಿತ್ರಕ್ಕಾಗಿ ಅಲ್ಲ, ಬಾಲಿವುಡ್‌ನ ‘ವ್ಯಾಂಪೈರ್ಸ್ ಆಫ್‌ ವಿಜಯನಗರ’ ಚಿತ್ರಗಾಗಿ ಬರುತ್ತಿದ್ದಾರೆ.

ಈ ಚಲನಚಿತ್ರದ ಕತೆ ಕರ್ನಾಟಕದಲ್ಲಿ ಶುರುವಾಗಲಿದೆ. ಅಕ್ಟೋಬರ್‌ನಲ್ಲಿ ಈ ಚಲನಚಿತ್ರದ ಚಿತ್ರೀಕರಣ ಹಂಪಿಯಲ್ಲಿ ನಡೆಯಲಿದೆ. 14ನೇ ಶತಮಾನದ ವಿಜಯನಗರ ಸಾಮ್ರಾಜ್ಯದ ಇತಿಹಾಸದ ಬಗ್ಗೆ ಈ ಚಿತ್ರದಲ್ಲಿ ತೋರಿಸಲಾಗುತ್ತದೆ ಎನ್ನಲಾಗಿದೆ.‌ ಇದೊಂದು ಭಯಾನಕ ಹಾಸ್ಯ ಚಿತ್ರವಾಗಿದ್ದು , ಈ ರೀತಿಯ ಜಾನರ್ ಚಲನಚಿತ್ರದಲ್ಲಿ ರಶ್ಮಿಕಾ ಇದೇ ಮೊದಲ ಬಾರಿಗೆ ನಟಿಸುತ್ತಿದ್ದಾರೆ. ನಟ ಆಯುಷ್ಮಾನ್‌ಗೆ ನಾಯಕಿಯಾಗಿ ನಟಿಸಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande